ವಿಜಯಪುರ: ನಗರದ ಮೆಹತರ್ ಮಹಲ್ ಬಳಿ ಮೊಹರಂ ಮೆರವಣಿಗೆ ಸಾಗುತ್ತಿದ್ದಾಗ ಆಟಿಕೆ ವಸ್ತುಗಳನ್ನು ಮಾರಾಟ ಮಾಡುವ ತಳ್ಳುವ ಗಾಡಿಗೆ ವಿದ್ಯುತ್ ಟಾನ್ಸ್ ಫಾರ್ಮರ್(ಟಿಸಿ) ತಗುಲಿ ವ್ಯಕ್ತಿಯೊಬ್ಬರು ಸಾವಿಗೀಡಾಗಿದ್ದಾರೆ.
ಆಟಿಕೆ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಮೊಹಮ್ಮದ್ ಇನಾಂದಾರ್ (40) ಸಾವಿಗೀಡಾಗಿದ್ದಾರೆ.
ಮೊಹರಂ ಮೆರವಣಿಗೆ ಸಾಗುವಾಗ ಮೊಹಮ್ಮದ್ ಅಟಿಕೆ ಮಾರಾಟ ಮಾಡುವ ತಳ್ಳುವ ಗಾಡಿಯೊಂದಿಗೆ ತೆರಳುತ್ತಿದ್ದರು. ಈ ವೇಳೆ ಕಾರೊಂದಕ್ಕೆ ದಾರಿ ಬಿಡುವ ಭರದಲ್ಲಿ ಟಿಸಿಗೆ ತಳ್ಳು ಗಾಡಿ ತಾಗಿ ವಿದ್ಯುತ್ ಪ್ರವಹಿಸಿದೆ. ಸ್ಥಳಕ್ಕೆ ಗೋಳಗುಮ್ಮಟ ಠಾಣೆ ಪೊಲೀಸರ ಭೇಟಿ ಪರಿಶೀಲನೆ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.