ADVERTISEMENT

ಹಂಪಿ ಕನ್ನಡ ವಿವಿ ಪಿಎಚ್‌ಡಿ ಪ್ರವೇಶ ಪರೀಕ್ಷೆ: ನಟಿ ಪವಿತ್ರಾ ಲೋಕೇಶ್‌ ಉತ್ತೀರ್ಣ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2023, 16:09 IST
Last Updated 5 ಆಗಸ್ಟ್ 2023, 16:09 IST
 ಪವಿತ್ರಾ ಲೋಕೇಶ್‌
ಪವಿತ್ರಾ ಲೋಕೇಶ್‌   

ಹೊಸಪೇಟೆ: ಬಹುಭಾಷಾ ನಟಿ ಪವಿತ್ರಾ ಲೋಕೇಶ್‌ ಅವರು ಹಂಪಿಯ ಕನ್ನಡ ವಿಶ್ವವಿದ್ಯಾಲಯ ನಡೆಸಿದ ಪಿಎಚ್‌.ಡಿ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ (ಸಿಇಟಿ) ಉತ್ತೀರ್ಣರಾಗಿದ್ದಾರೆ.

ಬೆಳಗಾವಿಯ ವಿಸ್ತರಣಾ ಕೇಂದ್ರದಲ್ಲಿ ಸಂಶೋಧನೆ ಕೈಗೊಳ್ಳುವ ಸಲುವಾಗಿ ಕನ್ನಡ ಭಾಷಾ ವಿಷಯದಲ್ಲಿ ಅವರು ಪರೀಕ್ಷೆ ಬರೆದಿದ್ದರು. 981 ಅಭ್ಯರ್ಥಿಗಳ ಪೈಕಿ 259 ಮಂದಿ ಉತ್ತೀರ್ಣರಾಗಿದ್ದು, ಅದರಲ್ಲಿ ಪವಿತ್ರಾ ಲೋಕೇಶ್‌ ಸಹ ಒಬ್ಬರಾಗಿದ್ದಾರೆ.

ಮೆರಿಟ್‌ ಪಟ್ಟಿಯಲ್ಲಿ ಪವಿತ್ರಾ ಅವರ ಹೆಸರಿಲ್ಲ. ಜ್ಯೇಷ್ಠತಾ ಪಟ್ಟಿ ಮತ್ತು ಕಾಯ್ದಿರಿಸಿದ ಪಟ್ಟಿಯಲ್ಲಿ ಸಹ ಅವರ ಹೆಸರಿಲ್ಲ. ಹೀಗಾಗಿ ಪ್ರವೇಶ ದೊರೆಯುವುದು ಅಷ್ಟು ಸುಲಭವಲ್ಲ ಎಂದು ಕುಲಸಚಿವ ಪ್ರೊ.ಎ.ಸುಬ್ಬಣ್ಣ ರೈ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.