ಹೊಸಪೇಟೆ (ವಿಜಯನಗರ): ವಿಜಯನಗರ–ಬಳ್ಳಾರಿ ಅವಳಿ ಜಿಲ್ಲೆಗಳಲ್ಲಿ ಒಂದು ವಾರದ ಅಂತರದಲ್ಲಿ ಪೆಟ್ರೋಲ್, ಡೀಸೆಲ್ ಸರಾಸರಿ ಬೆಲೆಯಲ್ಲಿ ಭಾರಿ ಏರಿಕೆಯಾಗಿದೆ.
ಜಿಲ್ಲೆಯಲ್ಲಿ ಹೋದ ವಾರ (ಸೆ.26) ಪ್ರತಿ ಲೀಟರ್ ಪೆಟ್ರೋಲ್ ಸರಾಸರಿ ಬೆಲೆ ₹106 ಇತ್ತು. ಈ ವಾರ ₹107.26ಕ್ಕೆ ಏರಿಕೆಯಾಗಿದ್ದು, ₹1.26 ಪೈಸೆ ಹೆಚ್ಚಳವಾಗಿದೆ. ಅದೇ ರೀತಿ ಹಿಂದಿನ ವಾರ ಡೀಸೆಲ್ ದರ ₹95.26 ಇತ್ತು. ಈ ವಾರ ₹97.56 ಆಗಿದ್ದು, ₹2.30 ಪೈಸೆ ಭಾರಿ ಏರಿಕೆ ಕಂಡಿದೆ.
ತೈಲ ಕಂಪನಿಗಳ ಪೆಟ್ರೋಲ್–ಡೀಸೆಲ್ ದರ ವಿವರದ ಪಟ್ಟಿ
ಪೆಟ್ರೋಲ್ (₹ ಪ್ರತಿ ಲೀಟರ್ಗೆ) | ಸೆ.26 | ಅ.03 |
ಎಚ್.ಪಿ. | 105.96 | 107.17 |
ಐ.ಒ.ಸಿ. | 105.99 | 107.25 |
ಬಿ.ಪಿ. | 106 | 107.26 |
ಡೀಸೆಲ್ (₹ ಪ್ರತಿ ಲೀಟರ್ಗೆ) | ಸೆ.26 | ಅ.03 |
ಎಚ್.ಪಿ. | 95.22 | 97.47 |
ಐ.ಒ.ಸಿ. | 95.25 | 97.54 |
ಬಿ.ಪಿ. | 95.26 | 97.56 |
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.