ADVERTISEMENT

ಹೊಸಪೇಟೆ | ₹1 ಲಕ್ಷ ಲಂಚ: ಪಿಡಬ್ಲ್ಯುಡಿ ಇಇ ಲೋಕಾಯುಕ್ತ ಬಲೆಗೆ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2026, 12:38 IST
Last Updated 10 ಫೆಬ್ರುವರಿ 2026, 12:38 IST
   

ಹೊಸಪೇಟೆ (ವಿಜಯನಗರ): ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಟಿ.ದೇವದಾಸ್ ಮತ್ತು ಅವರ ಕಚೇರಿಯ ಅಕೌಂಟೆಂಟ್‌ ಮಾರುತಿ ಅವರು ಮಂಗಳವಾರ ಇಲ್ಲಿನ ತಮ್ಮ ಕಚೇರಿಯಲ್ಲಿ ಗುತ್ತಿಗೆದಾರರೊಬ್ಬರಿಂದ ₹1 ಲಕ್ಷ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಹೂವಿನಹಡಗಲಿಯ ಗುತ್ತಿಗೆದಾರ ಮಹೇಶ್ ಹಲಗೇರಿ ಅವರು ಲೋಕೋಪಯೋಗಿ ಇಲಾಖೆಯ ಟೆಂಡರ್ ಮೂಲಕ ಕಾಮಗಾರಿ ಪಡೆದುಕೊಂಡು ಕಾಮಗಾರಿ ಮುಗಿಸಿದ್ದರು. ಬಿಲ್ ಮಂಜೂರಾತಿಗಾಗಿ ದೇವದಾಸ್‌ ಮತ್ತು ಮಾರುತಿ ಅವರು ಶೇ 10ರಷ್ಟು ಕಮಿಷನ್ ರೂಪದಲ್ಲಿ ₹1 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಲೋಕಯುಕ್ತಕ್ಕೆ ದೂರು ನೀಡಲಾಗಿತ್ತು. ಅದರಂತೆ ಗುತ್ತಿಗೆದಾರರು ಲಂಚ ನೀಡುತ್ತಿದ್ದಾಗ ಈ ಇಬ್ಬರೂ ಲೋಕಾಯುಕ್ತ ಬಲೆಗೆ ಬಿದ್ದರು. ಅವರನ್ನು ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಲೋಕಾಯುಕ್ತ ಡಿವೈಎಸ್‌ಪಿ ಸಚಿನ್ ಎಸ್.ಚಲವಾದಿ, ಇನ್‌ಸ್ಪೆಕ್ಟರ್‌ಗಳಾದ ರಾಜೇಶ್‌ ಎಸ್.ಲಮಾಣಿ, ಅಮರೇಶ್ ಹುಬ್ಳಿ, ಸಿಬ್ಬಂದಿ ಸುರೇಶ, ರೇಣುಕಪ್ಪ. ಕುಮಾರ ನಾಯ್ಕ್, ಚನ್ನಬಸಪ್ಪ, ಕೃಷ್ಣ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.