ADVERTISEMENT

ಬಸ್‌ ಡಿಕ್ಕಿ-ಬೈಕ್‌ ಸವಾರರಿಬ್ಬರ ಸಾವು

​ಪ್ರಜಾವಾಣಿ ವಾರ್ತೆ
Published 4 ಮೇ 2022, 16:54 IST
Last Updated 4 ಮೇ 2022, 16:54 IST
   

ಹೊಸಪೇಟೆ (ವಿಜಯನಗರ): ಜಾತ್ರೆಯ ಬಾಡೂಟ ಮುಗಿಸಿಕೊಂಡು ಮನೆಗೆ ಹಿಂತಿರುಗುವಾಗ ಅಪಘಾತ ಸಂಭವಿಸಿ ಇಬ್ಬರು ಯುವಕರು ಮೃತಪಟ್ಟಿರುವ ಘಟನೆ ತಾಲ್ಲೂಕಿನ ಗಾದಿಗನೂರು ಬಳಿ ಬುಧವಾರ ಜರುಗಿದೆ.

ಮೃತರನ್ನು ತಾಲ್ಲೂಕಿನ ಕಾಕುಬಾಳು ಗ್ರಾಮದ ಕಿರಣ್‌ ಬೇವಿನಮರದ (23), ಅಗಸರ ವೆಂಕಟೇಶ್‌ (25) ಎಂದು ಗುರುತಿಸಲಾಗಿದೆ.

ಗಾದಿಗನೂರಿನಲ್ಲಿ ಬುಧವಾರ ಗಾದೆಮ್ಮ ಜಾತ್ರೆ ಪ್ರಯುಕ್ತ ಸಂಬಂಧಿಕರ ಮನೆಯಲ್ಲಿ ಬಾಡೂಟ ಮುಗಿಸಿಕೊಂಡು ಕಿರಣ್‌ ಹಾಗೂ ವೆಂಕಟೇಶ್‌ ಟಿವಿಎಸ್‌ ಎಕ್ಸೆಲ್‌ ಬೈಕಿನಲ್ಲಿ ಊರಿಗೆ ವಾಪಸಾಗುತ್ತಿದ್ದರು.

ADVERTISEMENT

ಈ ವೇಳೆ ವೇಗವಾಗಿ ಬಂದ ಸಾರಿಗೆ ಸಂಸ್ಥೆಯ ಬಸ್‌ ಡಿಕ್ಕಿ ಹೊಡೆದಿದೆ. ತೀವ್ರ ರಕ್ತಸ್ರಾವವಾಗಿ ಕಿರಣ್‌ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿ ವೆಂಕಟೇಶ್‌ (25) ಜೀವ ಬಿಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.