ADVERTISEMENT

ಸಂಚಾರ ಠಾಣೆ ಸಿಬ್ಬಂದಿಗೆ ಬೀಳ್ಕೊಡುಗೆ

​ಪ್ರಜಾವಾಣಿ ವಾರ್ತೆ
Published 1 ಜೂನ್ 2021, 9:25 IST
Last Updated 1 ಜೂನ್ 2021, 9:25 IST
ಸೇವೆಯಿಂದ ನಿವೃತ್ತರಾದ ಸಂಚಾರ ಪೊಲೀಸ್ ಠಾಣೆಯ ಪಿಎಸ್‌ಐ ರಾಮಪ್ಪ ಹಾಗೂ ಎಎಸ್ಐ ಗಜಾನನ ನಾಯ್ಕ ಅವರಿಗೆ ಮಂಗಳವಾರ ಸಂಜೆ ಹೊಸಪೇಟೆಯಲ್ಲಿ ಇಲಾಖೆಯ ಸಿಬ್ಬಂದಿ ಸತ್ಕರಿಸಿ ಬೀಳ್ಕೊಟ್ಟರು
ಸೇವೆಯಿಂದ ನಿವೃತ್ತರಾದ ಸಂಚಾರ ಪೊಲೀಸ್ ಠಾಣೆಯ ಪಿಎಸ್‌ಐ ರಾಮಪ್ಪ ಹಾಗೂ ಎಎಸ್ಐ ಗಜಾನನ ನಾಯ್ಕ ಅವರಿಗೆ ಮಂಗಳವಾರ ಸಂಜೆ ಹೊಸಪೇಟೆಯಲ್ಲಿ ಇಲಾಖೆಯ ಸಿಬ್ಬಂದಿ ಸತ್ಕರಿಸಿ ಬೀಳ್ಕೊಟ್ಟರು   

ವಿಜಯನಗರ (ಹೊಸಪೇಟೆ): ಸೇವೆಯಿಂದ ನಿವೃತ್ತರಾದ ಇಲ್ಲಿನ ಸಂಚಾರ ಪೊಲೀಸ್ ಠಾಣೆಯ ಪಿಎಸ್‌ಐ ರಾಮಪ್ಪ ಹಾಗೂ ಎಎಸ್ಐ ಗಜಾನನ ನಾಯ್ಕ ಅವರಿಗೆ ಮಂಗಳವಾರ ಸಂಜೆ ಠಾಣೆಯಲ್ಲಿ ಏರ್ಪಡಿಸಿದ್ದ ಸರಳ ಕಾರ್ಯಕ್ರಮದಲ್ಲಿ ಸಿಬ್ಬಂದಿ ಆತ್ಮೀಯವಾಗಿ ಸನ್ಮಾನಿಸಿ ಬೀಳ್ಕೊಟ್ಟರು.

ಸನ್ಮಾನ ನೆರವೇರಿಸಿ ಮಾತನಾಡಿದ ಸಂಚಾರ ಠಾಣೆಯ ಪೊಲೀಸ್‌ ಇನ್‌ಸ್ಪೆಕ್ಟರ್‌ ಮಹಾಂತೇಶ್ ಸಜ್ಜನ್, ‘ಇಂದು ಕೆಲಸದಿಂದ ನಿವೃತ್ತರಾಗುತ್ತಿರುವ ಇಬ್ಬರೂ ಸಿಬ್ಬಂದಿ ಇಲಾಖೆಯಲ್ಲಿ ಯಾವುದೇ ಕಪ್ಪು ಚುಕ್ಕೆಯಿಲ್ಲದೇ ಕರ್ತವ್ಯ ನಿರ್ವಹಿಸಿದ್ದಾರೆ. ಅವರ ನಿವೃತ್ತಿ ಜೀವನ ಸುಖಕರವಾಗಿರಲಿ. ಸರ್ಕಾರಿ ಕೆಲಸದಲ್ಲಿ ಬದ್ಧತೆಯಿಂದ ಕೆಲಸ ನಿರ್ವಹಿಸಿದರೆ ನಿವೃತ್ತ ಜೀವನ ಬಹಳ ಸುಖಕರ, ತೃಪ್ತಿದಾಯಕವಾಗಿರುತ್ತದೆ’ ಎಂದು ಹೇಳಿದರು.

‘ಕೋವಿಡ್‌ ಸಂಕಷ್ಟದ ಸಮಯದಲ್ಲೂ ರಾಮಪ್ಪ ಹಾಗೂ ಗಜಾನನ ನಾಯ್ಕ ಅವರು ಒಂದು ದಿನವೂ ವಿಶ್ರಾಂತಿ, ರಜೆ ಪಡೆಯದೇ ಕೆಲಸ ಮಾಡಿದ್ದಾರೆ. ಸೇವೆಯ ಕೊನೆಯ ದಿನವೂ ಅಷ್ಟೇ ಶ್ರದ್ಧೆ, ನಿಷ್ಠೆಯಿಂದ ಕೆಲಸ ಮಾಡಿದ್ದಾರೆ’ ಎಂದು ತಿಳಿಸಿದರು.

ADVERTISEMENT

ಪಟ್ಟಣ ಪೊಲೀಸ್ ಠಾಣೆಯ ಯಲ್ಲಪ್ಪ ಹಾಗೂ ಸಂಚಾರ ಠಾಣೆಯ ಸಿಬ್ಬಂದಿ, ಸರ್ಕಾರಿ ನೌಕರರ ಸಂಘದ ಕಡ್ಲಿ ವೀರಭದ್ರಪ್ಪ, ವೈ.ಯಮುನೇಶ್ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.