ADVERTISEMENT

ಹಂಪಿಯಲ್ಲಿ ‘ದೇವಾಯತನ’ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2022, 13:50 IST
Last Updated 24 ಫೆಬ್ರುವರಿ 2022, 13:50 IST
ಕಾರ್ಯಕ್ರಮ ನಡೆಯಲಿರುವ ಹಂಪಿ ಪಟ್ಟಾಭಿರಾಮ ದೇವಸ್ಥಾನದ ಬಳಿ ನಿರ್ಮಿಸಿರುವ ವೇದಿಕೆ
ಕಾರ್ಯಕ್ರಮ ನಡೆಯಲಿರುವ ಹಂಪಿ ಪಟ್ಟಾಭಿರಾಮ ದೇವಸ್ಥಾನದ ಬಳಿ ನಿರ್ಮಿಸಿರುವ ವೇದಿಕೆ   

ಹೊಸಪೇಟೆ (ವಿಜಯನಗರ): ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯು ‘ಭಾರತೀಯ ದೇವಾಲಯ ವಾಸ್ತುಶಿಲ್ಪದ ಅದ್ಭುತ ಮಹಾಕಾವ್ಯ’ ಕುರಿತು ಹಮ್ಮಿಕೊಂಡಿರುವ ಎರಡು ದಿನಗಳ ‘ದೇವಾಯತನ’ ಸಮ್ಮೇಳನಕ್ಕೆ ಕೇಂದ್ರ ಸಂಸ್ಕೃತಿ ಸಚಿವ ಜಿ. ಕಿಶನ್‌ ರೆಡ್ಡಿ ಶುಕ್ರವಾರ (ಫೆ.25) ಚಾಲನೆ ನೀಡುವರು.

ಹಂಪಿಯ ಪಟ್ಟಾಭಿರಾಮ ದೇವಸ್ಥಾನದಲ್ಲಿ ಬೆಳಿಗ್ಗೆ 9.30ಕ್ಕೆ ನಡೆಯಲಿರುವ ಕಾರ್ಯಕ್ರಮದಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ಪುರಾತತ್ವ ಇಲಾಖೆಯ ಅಧಿಕಾರಿಗಳು, ತಜ್ಞರು ಪಾಲ್ಗೊಳ್ಳುವರು.

‘ಆಜಾದಿ ಕಾ ಅಮೃತ್‌ ಮಹೋತ್ಸವ’ದ ಭಾಗವಾಗಿ ಕಾರ್ಯಕ್ರಮ ಆಯೋಜಿಸಲಾಗಿದೆ. ಸಮ್ಮೇಳನದಲ್ಲಿ ದೇವಾಲಯಗಳ ತಾತ್ವಿಕ, ಧಾರ್ಮಿಕ, ಸಾಮಾಜಿಕ, ಆರ್ಥಿಕ, ತಾಂತ್ರಿಕ, ವೈಜ್ಞಾನಿಕ, ಕಲೆ ಮತ್ತು ವಾಸ್ತುಶಿಲ್ಪದ ಕುರಿತು ಚರ್ಚಿಸಲಾಗುತ್ತದೆ. 30 ಜನ ವಿದ್ವಾಂಸರು ಪ್ರಬಂಧ ಕೂಡ ಮಂಡಿಸುವರು. ಇದೇ ವೇಳೆ ದೇಶದ ಪ್ರಮುಖ 75 ದೇವಸ್ಥಾನಗಳ ಕಿರು ಪರಿಚಯ ಹೊಂದಿರುವ ಪುಸ್ತಕ ಬಿಡುಗಡೆಗೊಳಿಸಲಾಗುತ್ತದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.