ADVERTISEMENT

ಹೊಸಪೇಟೆ: ಭಾಷಾಂತರ ತರಬೇತಿ ಕಮ್ಮಟಕ್ಕೆ ತೆರೆ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2023, 10:04 IST
Last Updated 14 ಮಾರ್ಚ್ 2023, 10:04 IST
ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಭಾಷಾಂತರ ಕೇಂದ್ರದ ನಿರ್ದೇಶಕ ಎ. ಮೋಹನ ಕುಂಟಾರ್‌ ಮಾತನಾಡಿದರು
ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಭಾಷಾಂತರ ಕೇಂದ್ರದ ನಿರ್ದೇಶಕ ಎ. ಮೋಹನ ಕುಂಟಾರ್‌ ಮಾತನಾಡಿದರು   

ಹೊಸಪೇಟೆ (ವಿಜಯನಗರ): ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಭಾಷಾಂತರ ಕೇಂದ್ರ ಮತ್ತು ಆಂತರಿಕ ಗುಣಮಟ್ಟ ಭರವಸೆ ಕೋಶದಿಂದ ಏರ್ಪಡಿಸಿದ್ದ ಮೂರು ದಿನಗಳ ಭಾಷಾಂತರ ತರಬೇತಿ ಕಮ್ಮಟಕ್ಕೆ ಮಂಗಳವಾರ ತೆರೆ ಬಿದ್ದಿದೆ.

ಭಾಷಾಂತರ ಕೇಂದ್ರದ ನಿರ್ದೇಶಕ ಎ. ಮೋಹನ ಕುಂಟಾರ್‌ ಮಾತನಾಡಿ, ‘ಯಾವುದೇ ತರಬೇತಿ ಕಮ್ಮಟಗಳ ಪರಿಪೂರ್ಣ ಭಾಷಾಂತರಕಾರರನ್ನು ಸೃಷ್ಟಿಸಲಾರದು. ತರಬೇತಿ ಕಾರ್ಯಕ್ರಮದಲ್ಲಿ ಪಡೆದ ತಿಳಿವಳಿಕೆಯನ್ನು ಮುಂದಿನ ದಿನಗಳಲ್ಲಿ ಪ್ರಾಯೋಗಿಕವಾಗಿ ಬಳಸಿದಾಗ ಪ್ರತಿಯೊಬ್ಬರಿಗೂ ಅದರ ಪ್ರಯೋಜನ ಸಿಗಬಹುದು’ ಎಂದು ಹೇಳಿದರು.

ಪದ್ಯ, ಗದ್ಯ, ವರದಿಗಾರಿಕೆ ಇತ್ಯಾದಿಗಳ ಹಿನ್ನೆಲೆಯಲ್ಲಿ ಪ್ರಾಯೋಗಿಕವಾದ ಅನುಭವಗಳನ್ನು ಕೊಡಲಾಗಿದೆ. ಇದನ್ನು ನಿರಂತರವಾಗಿ ಕಲಿಕೆಯಲ್ಲಿ ಮುಂದುವರೆಸಿದರೆ ಔದ್ಯೋಗಿಕ ಬದುಕಿನಲ್ಲಿ ನೆರವಾಗುತ್ತದೆ ಎಂದರು.

ADVERTISEMENT

ಸಂಪನ್ಮೂಲ ವ್ಯಕ್ತಿಗಳಾಗಿ ಪ್ರಾಧ್ಯಾಪಕರಾದ ಟಿ.ಎಚ್. ಬಸವರಾಜ, ಅಬ್ದುಲ್ ಸಮದ್ ಕೊಟ್ಟೂರು, ಪವನಕುಮಾರ್ ಗೌಡ, ಐಕ್ಯುಎಸಿಯ ಸಹಾಯಕ ನಿರ್ದೇಶಕಿ ಡಿ. ಪ್ರಭಾ ಪಾಲ್ಗೊಂಡಿದ್ದರು. ಎಂ.ಎ.ಪಿಎಚ್.ಡಿ ಕನ್ನಡ ಸಾಹಿತ್ಯ ವಿದ್ಯಾರ್ಥಿಗಳಾದ ನಾಗರಾಜ ಎಚ್.ಎ., ಬುಂಡ ಲಕ್ಷ್ಮಣ ನಾಯ್ಕ, ನಾಗರತ್ನ ಎಚ್., ಶೀತಲ್ ಬೇಕ್ವಾಡಕರ್, ಜಿ. ಪ್ರಭಾಲತಾ, ಎಂ.ಎ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿದ್ಯಾರ್ಥಿಯಾದ ಹೊನ್ನಪ್ಪ, ಎಂ.ಎಸ್ಸಿ. ಯೋಗ ವಿದ್ಯಾರ್ಥಿನಿ ಜಯಶ್ರೀ ಮಾತನಾಡಿ, ಭಾಷಾಂತರದ ವಿಶಾಲವಾದ ಲೋಕವೊಂದನ್ನು ಈ ಮೂರು ದಿನಗಳಲ್ಲಿ ತೋರಿಸಿಕೊಡಲಾಗಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.