
ಪ್ರಜಾವಾಣಿ ವಾರ್ತೆ
ತುಂಗಭದ್ರಾ ಜಲಾಶಯ
ಹೊಸಪೇಟೆ (ವಿಜಯನಗರ): ತುಂಗಭದ್ರಾ ಅಣೆಕಟ್ಟೆಯ 10 ಗೇಟ್‌ಗಳಿಗೆ ಹೊಸದಾಗಿ ಕ್ರೆಸ್ಟ್‌ಗೇಟ್ ಅಳವಡಿಸುವ ಕಾರ್ಯ ಭರದಿಂದ ಸಾಗಿದ್ದು, ಕೆಲವೇ ದಿನಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ತುಂಗಭದ್ರಾ ಮಂಡಳಿ ತಿಳಿಸಿದೆ.
18ನೇ ಗೇಟ್ ಅಳವಡಿಸಿ 20 ದಿನಗಳು ಆಗಿವೆ. ಗೇಟ್ ಸಂಖ್ಯೆ 1, 4, 11, 17, 19, 20, 24, 27, 28 ಮತ್ತು 33ರ ಅಳವಡಿಕೆ ಪ್ರಕ್ರಿಯೆ ಪ್ರಗತಿಯಲ್ಲಿದೆ. ಹಳೆಯ ಗೇಟ್‌ಗಳನ್ನು ತೆರವುಗೊಳಿಸುವ ಪ್ರಕ್ರಿಯೆಯೂ ನಡೆದಿದೆ.
ಗದಗ ಮತ್ತು ಹೊಸಪೇಟೆ ತುಂಗಭದ್ರಾ ಅಣೆಕಟ್ಟೆ ಕಚೇರಿ ಬಳಿ ಗೇಟ್‌ಗಳ ರಚನೆ (ಫ್ಯಾಬ್ರಿಕೇಷನ್) ಕಾರ್ಯ ಭರದಿಂದ ಸಾಗಿದೆ. 21 ಗೇಟ್‌ಗಳ ರಚನೆ ಪೂರ್ಣಗೊಂಡಿದೆ. ಎರಡು ಗೇಟ್‌ಗಳ ರಚನೆ ಪ್ರಗತಿಯಲ್ಲಿದೆ. ಇನ್ನೂ ನಾಲ್ಕು ಗೇಟ್‌ಗಳ ರಚನೆಗೆ ಸಾಮಗ್ರಿಗಳು ಗದಗಕ್ಕೆ ಬಂದಿವೆ ಎಂದು ಮಂಡಳಿಯ ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.