ADVERTISEMENT

ಬೇವಿನಹಳ್ಳಿ ದೊಡ್ಡ ತಾಂಡ: ಗೋಲಿ ನುಂಗಿ ಮಗು ಸಾವು

​ಪ್ರಜಾವಾಣಿ ವಾರ್ತೆ
Published 13 ಜುಲೈ 2021, 13:51 IST
Last Updated 13 ಜುಲೈ 2021, 13:51 IST
ಮನವೀರ್
ಮನವೀರ್   

ಉಚ್ಚಂಗಿದುರ್ಗ: ಸಮೀಪದ ಬೇವಿನಹಳ್ಳಿ ದೊಡ್ಡ ತಾಂಡದಲ್ಲಿ ಮಂಗಳವಾರ ಮಧ್ಯಾಹ್ನ ಗಾಜಿನ ಗೋಲಿ ನುಂಗಿ ಒಂದು ವರ್ಷದ ಮಗು ಮೃತ ಪಟ್ಟಿದೆ.

ಉಚ್ಚಂಗಿದುರ್ಗ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮೋಹನ ನಾಯ್ಕ ಅವರ ಮಗ ಹರೀಶ್ ಅವರ ದ್ವಿತೀಯ ಪುತ್ರ ಮನವೀರ್ (13 ತಿಂಗಳು) ಮೃತಪಟ್ಟ ಮಗು.

ಹರೀಶ್ ಅವರ ಇಬ್ಬರು ಮಕ್ಕಳು ಮನೆಯಲ್ಲಿ ಆಟವಾಡುತ್ತಿರುವಾಗ ಆಕಸ್ಮಿಕವಾಗಿ ಮನವೀರ್ ಕೈಗೆ ಗೋಲಿ ಸಿಕ್ಕಿದ್ದು, ನುಂಗಿದ್ದಾನೆ. ಮಗುವಿಗೆ ಊಟ ಮಾಡಿಸಲು ಬಂದ ಅವರ ತಾಯಿ ಗಂಟಲಿನಲ್ಲಿ ಸಿಲುಕಿಕೊಂಡಿದ್ದ ಗೋಲಿಯನ್ನು ಗಮನಿಸಿ ತೆಗೆಯಲು ಪ್ರಯತ್ನ ಮಾಡಿದ್ದಾರೆ. ಚಿರಾಡುತ್ತಿದ್ದ ಮಗುವನ್ನು ಆಸ್ಪತ್ರೆಗೆ ಕೊಂಡೊಯ್ಯೋ ಮಾರ್ಗದ ಮಧ್ಯೆಯೇ ಮೃತ ಪಟ್ಟಿದೆ. ಅಕಾಲಿಕವಾಗಿ ಮಗುವನ್ನು ಕಳೆದುಕೊಂಡ ಮಗುವಿನ ಪೋಷಕರ ಆಕ್ರಂದನ ಮುಗಿಲು ಮುಟ್ಟಿತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.