ADVERTISEMENT

ಹಂಪಿ: ಯೋಗ ಕೌಂಟ್‌ಡೌನ್ ಕಾರ್ಯಕ್ರಮಕ್ಕೆ ತೆರೆ

ಐದು ವಾರ ಹಂಪಿಯ ವಿವಿಧ ಸ್ಮಾರಕಗಳಲ್ಲಿ ಯೋಗ ಶಿಬಿರ

​ಪ್ರಜಾವಾಣಿ ವಾರ್ತೆ
Published 12 ಜೂನ್ 2022, 6:38 IST
Last Updated 12 ಜೂನ್ 2022, 6:38 IST
ಹಂಪಿಯ ಕಮಲ ಮಹಲ್ ಸ್ಮಾರಕದ ಆವರಣದಲ್ಲಿ ಯೋಗಾಭ್ಯಾಸ
ಹಂಪಿಯ ಕಮಲ ಮಹಲ್ ಸ್ಮಾರಕದ ಆವರಣದಲ್ಲಿ ಯೋಗಾಭ್ಯಾಸ   

ಹೊಸಪೇಟೆ (ವಿಜಯನಗರ): ಅಂತರರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಹಂಪಿಯಲ್ಲಿ ಹಮ್ಮಿಕೊಂಡಿದ್ದ ಐದು ವಾರಗಳ ಕೌಂಟ್‌ಡೌನ್ ಕಾರ್ಯಕ್ರಮ ಭಾನುವಾರ ಕೊನೆಗೊಂಡಿತು.

ಹಂಪಿಯ ಕಮಲ ಮಹಲ್ ಸ್ಮಾರಕದ ಆವರಣದಲ್ಲಿ ಭಾನುವಾರ ನೂರಾರು ಶಿಬಿರಾರ್ಥಿಗಳು ಶ್ವೇತ ವಸ್ತ್ರಧರಿಸಿ ಯೋಗಾಭ್ಯಾಸ ಮಾಡಿದರು.

ಹರಿಹರ ಪಂಚಮಸಾಲಿ ಪೀಠದ ಪೀಠಾಧಿಪತಿ, ಶ್ವಾಸ ಕೇಂದ್ರದ ವಚನಾನಂದ ಸ್ವಾಮೀಜಿ ಯೋಗಾಭ್ಯಾಸ ಮಾಡಿಸಿದರು.

ADVERTISEMENT

ಜೂನ್‌ 21ರಂದು ಹಂಪಿ ಎದುರು ಬಸವಣ್ಣ ಮಂಟಪದ ಎದುರು ಅಂತರರಾಷ್ಟ್ರೀಯ ಯೋಗ ದಿನಾಚರಣೆ ನಡೆಯಲಿದ್ದು, ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಭಾಗವಹಿಸುವರು.

ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್, ಪತಂಜಲಿ ಯೋಗ ಸಮಿತಿ ಭವರ್‌ಲಾಲ್ ಆರ್ಯ, ಶ್ಯಾಂ ಚೌಧರಿ, ವಿಮಲ್ ಜೈನ್, ಪಲ್ಲವಿ ಅಮರನಾಥ್, ಆಯುಷ್ ಇಲಾಖೆ ಅಧಿಕಾರಿ ಸುಜಾತಾ ಪಾಟೀಲ, ವೈಜೆ ಶಿರಿವಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.