ADVERTISEMENT

ಶ್ರೀಗಂಧ ಚೋರರ ಬಂಧನ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2020, 15:18 IST
Last Updated 27 ಆಗಸ್ಟ್ 2020, 15:18 IST
   

ವಿಜಯಪುರ: ತೊರವಿ ಗ್ರಾಮದ ಹೊಲವೊಂದರಲ್ಲಿ ಇದ್ದ ಶ್ರೀಗಂಧದ ಮರವನ್ನು ಕಡಿದು, ತುಂಡು ಮಾಡಿ ಮಾರಾಟ ಮಾಡಲು ಸಾಗಿಸುತ್ತಿದ್ದ ಐವರು ಕಳ್ಳರನ್ನುಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳಿಂದ ₹75 ಸಾವಿರ ಮೌಲ್ಯದ 26 ಕೆ.ಜಿ.ತೂಕದ ಶ್ರೀಗಂಧದ 10 ತುಂಡುಗಳು ಹಾಗೂ ₹13,900 ನಗದನ್ನು ವಿಜಯಪುರ ಗ್ರಾಮೀಣ ಠಾಣೆ ಪಿಎಸ್‌ಐ ಆನಂದ ವಿ.ಠಕ್ಕಣ್ಣವರ ನೇತೃತ್ವದ ತಂಡ ವಶಪಡಿಸಿಕೊಂಡಿದೆ.

ವಿಜಯಪುರ ಮದಿನಾ ನಗರದಸಂಜಯ ದತ್ತು ಬಜಂತ್ರಿ, ಇಂಡಿ ತಾಲ್ಲೂಕಿನತಾಂಬಾದ ಅಕ್ಷಯ ಅಣ್ಣಪ್ಪ ಇಂಗಳೆ, ಇಂಡಿ ಪಟ್ಟಣದ ದರ್ಗಾ ಓಣಿಯ ಪರುಶುರಾಮ ಶಿವಣ್ಣ ಬಜಂತ್ರಿ, ಬಸವನ ಬಾಗೇವಾಡಿಯ ಶ್ರೀರಾಮ ನಗರದ ನಿವಾಸಿ ರಮೇಶ ಸಂಗಪ್ಪಬಜಂತ್ರಿ, ಇಂಡಿ ತಾಲ್ಲೂಕಿನ ಹಿರೇರೂಗಿಯ ಹಣಮಂತ ಅರ್ಜುನ ಮಾದರ ಬಂಧಿತ ಆರೋಪಿಗಳಾಗಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.