
ದೇವರಹಿಪ್ಪರಗಿ: ಭಾನುವಾರ(ಡಿ.21) ಜರುಗಲಿರುವ ಹಿಂದೂಗಳ ಸಂಸ್ಕೃತಿ ಸಮಾವೇಶ ಹಾಗೂ ಪಂಚಮಸಾಲಿ ಮೀಸಲಾತಿ ಪ್ರತಿಜ್ಞಾವಿಧಿ ಕಾರ್ಯಕ್ರಮದ ಸ್ಥಳಕ್ಕೆ ಶನಿವಾರ ಭೇಟಿ ನೀಡಿದ ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಪೂರ್ವ ತಯಾರು ವೀಕ್ಷಿಸಿದರು.
ಪಟ್ಟಣದ ಇಂಡಿ ರಸ್ತೆಯಲ್ಲಿಯ ವೀರರಾಣಿ ಕಿತ್ತೂರು ಚೆನ್ನಮ್ಮ ವೃತ್ತದ ಹತ್ತಿರದ ದಾನಗೊಂಡ ಲೇಔಟ್‌ನ ಸ್ಥಳಕ್ಕೆ ಶನಿವಾರ ಆಗಮಿಸಿದ ಸ್ವಾಮೀಜಿ, ಕಾರ್ಯಕ್ರಮದ ರೂಪುರೇಷೆ ಮಾಹಿತಿ ಪಡೆದು ಪೂರ್ವತಯಾರಿ ಬಗ್ಗೆ ತೃಪ್ತಿ ವ್ಯಕ್ತಪಡಿಸಿ, ಸಮುದಾಯದ ಶೈಕ್ಷಣಿಕ, ಸಾಮಾಜಿಕ ಸ್ಥಾನಮಾನ ಹಾಗೂ ಮೀಸಲಾತಿಗಾಗಿ ಕೈಗೊಂಡ ಸಮಾವೇಶದಲ್ಲಿ ಸಮುದಾಯದ ಎಲ್ಲರೂ ಭಾಗವಹಿಸಲು ಕರೆ ನೀಡಿದರು
ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ರಮೇಶ ಮಸಬಿನಾಳ ಮಾತನಾಡಿ, ಭಾನುವಾರದ ಸಮಾವೇಶದ ಯಶಸ್ವಿಗಾಗಿ ಈಗಾಗಲೇ ಎಲ್ಲ ತಯಾರಿ ಮಾಡಿಕೊಳ್ಳಲಾಗಿದೆ. ಪ್ರತಿಯೊಬ್ಬರು ಸ್ವಯಂ ಪ್ರೇರಣೆಯಿಂದ ವಿವಿಧ ಕಾರ್ಯಗಳ ಜವಾಬ್ದಾರಿ ನಿರ್ವಹಿಸಲು ಮುಂದಾಗಿರುವುದು ಸಂತೋಷದ ವಿಷಯ ಎಂದರು.
ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭೆಯ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಎಂ.ಪಾಟೀಲ, ತಾಲ್ಲೂಕು ಘಟಕ ಅಧ್ಯಕ್ಷ ಗುರುರಾಜ ಆಕಳವಾಡಿ, ಪಟ್ಟಣ ಪಂಚಾಯಿತಿ ಸದಸ್ಯ ಕಾಸುಗೌಡ ಬಿರಾದಾರ, ಸಿ.ಕೆ.ಕುದರಿ, ಮುದುಕಪ್ಪ ದಾನಗೊಂಡ, ಶಿವನಗೌಡ ಪಾಟೀಲ, ಶ್ರೀಶೈಲ ಮುಳಜಿ, ಶ್ರೀಶೈಲ ದಾನಗೊಂಡ, ಪಂಚಾಕ್ಷರಿ ಮಿಂಚನಾಳ, ಸಿದ್ದು ಮಸಬಿನಾಳ, ಜಿ.ಪಿ.ಬಿರಾದಾರ, ಮಡುಗೌಡ ಬಿರಾದಾರ, ಕುಮಾರ ಜೋಗೂರ, ರಮೇಶ ಮಾಳನೂರ, ವೀರೇಶ ಕುದರಿ, ರಾಮು ದೇಸಾಯಿ, ಸೋಮು ದೇವೂರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.