ADVERTISEMENT

ವಿಜಯಪುರದ ಇಬ್ಬರು ಪೊಲೀಸರಿಗೆ ಮುಖ್ಯಮಂತ್ರಿ ಪದಕ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2022, 14:33 IST
Last Updated 30 ಮಾರ್ಚ್ 2022, 14:33 IST

ವಿಜಯಪುರ: ಜಿಲ್ಲೆಯ ಇಬ್ಬರು ಪೊಲೀಸ್‌ ಅಧಿಕಾರಿಗಳಿಗೆ 2021ನೇ ಸಾಲಿನ ಮುಖ್ಯಮಂತ್ರಿ ಪೊಲೀಸ್‌ ಪದಕ ಲಭಿಸಿದೆ.

ವಿಜಯಪುರ ಡಿಸಿಆರ್‌ಬಿಯ ಮಹಿಳಾ ಹೆಡ್‌ ಕಾನ್‌ಸ್ಟೆಬಲ್‌ ಜಯಶ್ರೀ ಎಚ್‌.ಸಿಕ್ಕೇರಿ ಹಾಗೂ ವಿಜಯಪುರ ಜಲನಗರ ಠಾಣೆಯ ಸಿಪಿಸಿ ಪುಂಡಲೀಕ ಶಿವಶರಣ ಬಿರಾದಾರ ಅವರಿಗೆ ಮುಖ್ಯಮಂತ್ರಿ ಪೊಲೀಸ್‌ ಪದಕ ಲಭಿಸಿದೆ.

ಏಪ್ರಿಲ್‌ 3ರಂದು ಬೆಂಗಳೂರಿನ ಕೋರಮಂಗಲ ಕೆಎಸ್‌ಆರ್‌ಪಿ ಮೈದಾನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪದಕ ಪ್ರದಾನ ಸಮಾರಂಭ ನಡೆಯಲಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.