
ತಿಕೋಟಾ: ಕರ್ನಾಟಕ ರಾಜ್ಯದ ಗಡಿ ಭಾಗ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ತ ತಾಲ್ಲೂಕಿನ ಗುಡ್ಡಾಪುರ ದಾನಮ್ಮದೇವಿ ಜಾತ್ರೆ ಛಟ್ಟಿ ಅಮಾವಾಸ್ಯೆಯಂದು ಅದ್ದೂರಿಯಾಗಿ ನಡೆಯಲಿದೆ.
ಮಹಾರಾಷ್ಟ್ರ ಹಾಗೂ ಕರ್ನಾಟಕ ಸೇರಿದಂತೆ ಹಲವು ಜಿಲ್ಲೆಗಳಿಂದ ಭಕ್ತಾದಿಗಳು ವಾಹನಗಳ ಮೂಲಕ ಅಲ್ಲದೇ ರಸ್ತೆಯುದ್ದಕ್ಕೂ ಪಾದಯಾತ್ರೆಯ ಮೂಲಕ ಸಾಗಿದರು. ರಸ್ತೆಯುದ್ದಕ್ಕೂ ಭಕ್ತರು, ಉದ್ಯಮಿಗಳು, ವ್ಯಾಪಾರಸ್ಥರು ಸ್ವಯಂಪ್ರೇರಿತವಾಗಿ ಅಲ್ಪೋಪಹಾರ, ಚಹಾ, ಬಾಳೆಹಣ್ಣು, ಬಿಸ್ಕಿಟ್ ವಿತರಿಸುತ್ತಾ ಪಾದಯಾತ್ರಿಗಳಿಗೆ ಸಹಕರಿಸುತ್ತಾ ಅಲ್ಲಲ್ಲಿ ವೈಧ್ಯಕೀಯ ತಪಾಸಣೆ ಕೂಡಾ ಮಾಡಲಾಯಿತು.
ವಿವಿಧ ಜಿಲ್ಲೆಗಳಿಂದ ಆಗಮಿಸುವ ಭಕ್ತರಿಗೆ ವಿಶೇಷ ಬಸ್ ಗಳ ವ್ಯವಸ್ಥೆ ಮಾಡಲಾಗಿದೆ. ದಾನಮ್ಮದೇವಿ ಜಪ ಮಾಡುತ್ತಾ ಉದ್ಘೋಷ ಹಾಕುತ್ತಾ ಮಹಿಳೆಯರು, ಯುವಕರು ಸಾಗಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.