
ದೇವರಹಿಪ್ಪರಗಿ: ತಾಲ್ಲೂಕಿನ ಮುಳಸಾವಳಗಿ ಗ್ರಾಮದಲ್ಲಿ ಸಿದ್ಧಾರೂಢರ ಮೂರ್ತಿ ಪ್ರಾಣಪ್ರತಿಷ್ಠಾಪನೆಯ 19ನೇ ವಾರ್ಷಿಕೋತ್ಸವ ಹಾಗೂ ಜಾತ್ರಾ ಮಹೋತ್ಸವ ಫೆ.9ರಿಂದ 11ರ ವರೆಗೆ ಜರುಗಲಿದೆ.
ಗ್ರಾಮದ ಕೈವಲ್ಯ ಆಶ್ರಮ ಸಿದ್ಧಾರೂಢಮಠದಲ್ಲಿ ಬೀದರ ಚಿದಂಬರಾಶ್ರಮದ ಶಿವಕುಮಾರ ಶ್ರೀಗಳ ಅಧ್ಯಕ್ಷತೆಯಲ್ಲಿ ಸಿದ್ಧಾರೂಢರ ಅಮೃತಶಿಲಾಮೂರ್ತಿಗೆ ರುದ್ರಾಭಿಷೇಕ ನಂತರ ಪಲ್ಲಕ್ಕಿ ಮೆರವಣಿಗೆ ಜರುಗಲಿದೆ. ನಂತರ ಶಿವಕುಮಾರ ಶ್ರೀಗಳು ಹಾಗೂ ಸಿದ್ಧಾರೂಢರ ಪ್ರತಿಮೆ ತುಲಾಭಾರ ಸೇವೆಗಳು ನಡೆಯಲಿವೆ. ನಂತರ ವಿವಿಧ ಪೂಜ್ಯರ ಸಮ್ಮುಖದಲ್ಲಿ ಪ್ರವಚನ ಕಾರ್ಯಕ್ರಮ ಆರಂಭಗೊಳ್ಳಲಿದೆ.
ಸಂಜೆ ನೂತನ ಮಂಗಲ ಕಾರ್ಯಾಲಯ ಉದ್ಘಾಟನೆ, ಶಾಸಕ ಬಸನಗೌಡ ಪಾಟೀಲ(ಯತ್ನಾಳ), ದೇವರಹಿಪ್ಪರಗಿ ಕ್ಷೇತ್ರದ ಮಾಜಿಶಾಸಕ ಸೋಮನಗೌಡ ಪಾಟೀಲ (ಸಾಸನೂರ) ಹಾಗೂ ಬಿಜೆಪಿ ಧುರೀಣರು ಭಾಗವಹಿಲಿದ್ದಾರೆ.
ಫೆ.10ರಂದು ನೂತನ ಪ್ರಸಾದ ನಿಲಯದ ಭೂಮಿಪೂಜೆಯನ್ನು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ, ಶಾಸಕ ರಾಜುಗೌಡ ಪಾಟೀಲ(ಕುದರಿ ಸಾಲವಾಡಗಿ), ಮಾಜಿ ಶಾಸಕ ಶರಣಪ್ಪ ಸುಣಗಾರ, ನೇತ್ರತಜ್ಞ ಪ್ರಭುಗೌಡ ಬಿ.ಎಲ್(ಚಬನೂರ) ನೆರವೇರಿಸಲಿದ್ದಾರೆ.
ಫೆ.11ರಂದು ಬೆಳಿಗ್ಗೆ ಜರುಗುವ ಕಾರ್ಯಕ್ರಮದಲ್ಲಿ ಸಂಸದ ರಮೇಶ ಜಿಗಜಿಣಗಿ ಹಾಗೂ ಬಿಜೆಪಿ ಮುಖಂಡರು ಭಾಗವಹಿಸಲಿದ್ದಾರೆ ಎಂದು ಜಾತ್ರಾ ಮಹೋತ್ಸವ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.