ADVERTISEMENT

ವಿಜಯಪುರ: ಧನರ್ಗಿ– ತಿಕೋಟಾ ಬಸ್‌ ಸಂಚಾರ ಇಂದಿನಿಂದ

​ಪ್ರಜಾವಾಣಿ ವಾರ್ತೆ
Published 5 ಜನವರಿ 2026, 4:25 IST
Last Updated 5 ಜನವರಿ 2026, 4:25 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ವಿಜಯಪುರ: ವಿಜಯಪುರ ನಗರದಿಂದ ಇಟ್ಟಂಗಿಹಾಳ- ಧನರ್ಗಿ ಮಾರ್ಗವಾಗಿ ತಿಕೋಟಾ ವರೆಗೆ ಜಲವರಿ 5 ರಿಂದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ನೂತನ ಬಸ್ ಸಂಚಾರ ಪ್ರಾರಂಭಿಸಲಿದೆ.

ವಿದ್ಯಾರ್ಥಿಗಳು, ರೈತರು‌ ಕಾರ್ಮಿಕರು ಹಾಗೂ ಸಾರ್ವಜನಿಕರ ಸಂಚಾರಕ್ಕೆ ಅನುಕೂಲವಾಗಲು‌  ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ‌ ಅವರು ಹೊಸ ಬಸ್ ಸೇವೆ ಪ್ರಾರಂಭಿಸಲು ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಈ ಬಸ್ ಸೇವೆ ಪ್ರಾರಂಭಿಸಲಾಗುತ್ತಿದೆ.

ADVERTISEMENT

ಪ್ರತಿ‌ದಿನ‌ ಒಂದು ಬಸ್‌ ವಿಜಯಪುರದಿಂದ ಇಟ್ಡಂಗಿಹಾಳ, ಲೋಹಗಾಂವ, ಧನರ್ಗಿ, ಸಿದ್ದಾಪುರ ಕೆ., ಮಲಕನದೇವರಹಟ್ಟಿ, ಸೋಮದೇವರಹಟ್ಟಿ ಮಾರ್ಗವಾಗಿ ತಿಕೋಟಾಕ್ಕೆ ಸಂಚರಿಸಲಿದೆ. ಈ‌ ಮಾರ್ಗದಲ್ಲಿ ಬರುವ ತಾಂಡಾಗಳು ಹಾಗೂ ವಸ್ತಿಗಳಿಗೂ ನಿಲುಗಡೆ ನೀಡಲಾಗಿದೆ‌.

ಪ್ರತಿದಿನ ತಲಾ ನಾಲ್ಕು ಬಾರಿ ಈ ಮಾರ್ಗವಾಗಿ ಬಸ್ ವಿಜಯಪುರದಿಂದ ತಿಕೋಟಾ ಮತ್ತು ತಿಕೋಟಾದಿಂದ ವಿಜಯಪುರಕ್ಕೆ ಸಂಚರಿಸಲಿದೆ.

ಸೋಮವಾರ ಬೆಳಿಗ್ಗೆ 10 ಗಂಟೆಗೆ ಲೋಹಗಾಂವ ಗ್ರಾಮದಲ್ಲಿ ಈ ಬಸ್ ಸಂಚಾರಕ್ಕೆ ಚಾಲನೆ ನೀಡಲಾಗುತ್ತಿದೆ ಎಂದು ಸಚಿವರು ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.