ADVERTISEMENT

ನಿಡಗುಂದಿ: ಅರಣ್ಯ ಪ್ರದೇಶದಲ್ಲಿ ಬೆಂಕಿ, ಅಪಾರ ಪ್ರಮಾಣದ ಮರಗಿಡಗಳು ಬೆಂಕಿಗಾಹುತಿ

​ಪ್ರಜಾವಾಣಿ ವಾರ್ತೆ
Published 1 ಮೇ 2021, 16:36 IST
Last Updated 1 ಮೇ 2021, 16:36 IST
   

ನಿಡಗುಂದಿ(ವಿಜಯಪುರ): ಪಟ್ಟಣದ ಸಮೀಪ ಅರಣ್ಯ ಪ್ರದೇಶಕ್ಕೆ ಬೆಂಕಿ ತಗುಲಿ ಅಪಾರ ಪ್ರಮಾಣದ ಮರಗಿಡಗಳು ಬೆಂಕಿಗಾಹುತಿಯಾದ ಘಟನೆ ಶನಿವಾರ ರಾತ್ರಿ ಸಂಭವಿಸಿದೆ.

ಆಲಮಟ್ಟಿ ರಸ್ತೆಯ ನಿರ್ಮಾಣ ಹಂತದಲ್ಲಿರುವ ಉದ್ಯಾನ ಪಕ್ಕದಲ್ಲಿರುವ ಕೆಬಿಜೆಎನ್ಎಲ್‌ಗೆ ಸೇರಿದ ನೂರಾರು ಎಕರೆ ಅರಣ್ಯ ಪ್ರದೇಶವಿದ್ದು ನಾನಾ ಜಾತಿಯ ಮರಗಿಡಗಳನ್ನು ಬೆಳೆಸಲಾಗಿದ್ದು ಶನಿವಾರ ರಾತ್ರಿ ಸಂಭವಿಸಿದ ಬೆಂಕಿ ಅವಘಡದಿಂದ ಬೇವು, ಹೊಂಗೆ, ಗೋಡಂಬಿ, ಆಲ ಸೇರಿದಂತೆ ನಾನಾ ಜಾತಿಯ ಗಿಡಗಳಿಗೆ ಹಾನಿಯುಂಟಾಗಿದೆ.

ಬೆಂಕಿ ನಂದಿಸಲು ಹರಸಾಹಸ: ಶಾರ್ಟ್ ಸರ್ಕಿಟ್ ನಿಂದ ಉಂಟಾದ ಬೆಂಕಿ ಕೆಲ ನಿಮಿಷಗಳಲ್ಲಿಯೇ ಅಪಾರ ಪ್ರದೇಶಕ್ಕೆ ವ್ಯಾಪಿಸಿದೆ. ಮರಗಿಡಗಳ ಕೆಳಗಿದ್ದ ಹುಲ್ಲು ಬೇಸಿಗೆಯಿಂದ ಒಣಗಿದ ಪರಿಣಾಮ ಬೆಂಕಿ ಕೆಲ ಕ್ಷಣಗಳಲ್ಲಿ ವ್ಯಾಪಿಸಲು ಕಾರಣವಾಗಿದೆ.ಬೆಂಕಿ ನಂದಿಸಲು ಬಸವನ ಬಾಗೇವಾಡಿ ಹಾಗೂ ಮುದ್ದೇಬಿಹಾಳ ಅಗ್ನಿ ಶಾಮಕ ದಳ ಸಿಬ್ಬಂದಿ ಹರಸಾಹಸ ಪಟ್ಟರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.