ADVERTISEMENT

ದೇವರಹಿಪ್ಪರಗಿ: ಮನೆಯೊಳಗೆ ನುಗ್ಗಿದ ನೀರು

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2025, 4:51 IST
Last Updated 16 ಸೆಪ್ಟೆಂಬರ್ 2025, 4:51 IST
ದೇವರಹಿಪ್ಪರಗಿ ಪಟ್ಟಣದಲ್ಲಿ ಭಾನುವಾರ ರಾತ್ರಿ ಸುರಿದ ಮಳೆಯಿಂದ ವಾರ್ಡ್‌ ನಂ.1 ರಲ್ಲಿ ಮೇನ್ ಬಜಾರದಲ್ಲಿರುವ ಆನಂದ ಸದಯ್ಯನಮಠ ಎಂಬುವವರ ಮನೆಗೆ ನುಗ್ಗಿದ ಮಳೆ ನೀರು 
ದೇವರಹಿಪ್ಪರಗಿ ಪಟ್ಟಣದಲ್ಲಿ ಭಾನುವಾರ ರಾತ್ರಿ ಸುರಿದ ಮಳೆಯಿಂದ ವಾರ್ಡ್‌ ನಂ.1 ರಲ್ಲಿ ಮೇನ್ ಬಜಾರದಲ್ಲಿರುವ ಆನಂದ ಸದಯ್ಯನಮಠ ಎಂಬುವವರ ಮನೆಗೆ ನುಗ್ಗಿದ ಮಳೆ ನೀರು    

ದೇವರಹಿಪ್ಪರಗಿ: ಮಳೆ ನೀರು ಮನೆಗೆ ನುಗ್ಗಿದ್ದರಿಂದ ಮಾರಾಟಕ್ಕೆ ತಯಾರಿಸಿದ್ದ ಸಿಹಿತಿಂಡಿ ಸಹಿತ ₹50 ಸಾವಿರ ಮೌಲ್ಯದ ಎಲೆಕ್ಟ್ರಾನಿಕ್ಸ್ ವಸ್ತುಗಳು ಹಾಳಾದ ಘಟನೆ ಪಟ್ಟಣದಲ್ಲಿ ಭಾನುವಾರ ಜರುಗಿದೆ.

ಪಟ್ಟಣದಲ್ಲಿ ಭಾನುವಾರ ರಾತ್ರಿ ಸುರಿದ ಸತತ ಮಳೆಯಿಂದ ಸದಯ್ಯನಮಠ ಸುತ್ತಮುತ್ತಲಿನ ಆನಂದ, ಮಲ್ಲಯ್ಯ, ಶಿವಯ್ಯ ಹಾಗೂ ಶ್ರೀಶೈಲ ಸ್ಥಾವರಮಠ ಎಂಬುವವರ ಮನೆಗಳಿಗೆ ಮಳೆ ನೀರು ನುಗ್ಗಿ ಅವಾಂತರ ಸೃಷಿಸಿದೆ. ಮಳೆ ನೀರು ಮನೆಯುದ್ದಕ್ಕೂ ತುಂಬಿದ ಪರಿಣಾಮ ಮಕ್ಕಳು ಸಹಿತ ಕುಟುಂಬದವರೆಲ್ಲ ನಿದ್ರಿಸಲು ಆಗದೇ ಅಸಹಾಯಕರಾಗಿ ಒಂದೆಡೇ ಕುಳಿತರು. ಜೊತೆಗೆ ಸೋಮವಾರ ಸಂತೆಯ ಮಾರಾಟಕ್ಕೆ ಸಿದ್ಧಪಡಿಸಿದ್ದ ಶೇವು, ಬೂಂದೆ ಲಾಡು, ಜಿಲೇಬಿಯಂತಹ ಸಾವಿರಾರು ಮೌಲ್ಯದ ತಿನಿಸುಗಳು ಸಂಪೂರ್ಣವಾಗಿ ಹಾಳಾಗಿವೆ. ಆನಂದ ಸದಯ್ಯನಮಠ ಅವರ ಮನೆಯಲ್ಲಿ ಸುಮಾರು ಒಂದು ಅಡಿಯಷ್ಟು ನೀರು ರಾತ್ರಿ ಇಡೀ ಇದ್ದ ಕಾರಣ ಪ್ರೀಜ್‌,ಕೂಲರ್‌ ಸಹಿತ ಹಲವು ಎಲೆಕ್ಟ್ರಾನಿಕ್ಸ್‌ ವಸ್ತುಗಳು ಹಾನಿಗೊಳಗಾಗಿವೆ.

ಪಟ್ಟಣದಲ್ಲಿ ಸುರಿಯುತ್ತಿರುವ ಮಳೆಯಿಂದ ತಗ್ಗಾದ ಪ್ರದೇಶ ಹಾಗೂ ರಸ್ತೆಗಳಲ್ಲಿ ನೀರು ನಿಂತು ಸಾರ್ವಜನಿಕರ ತೊಂದರೆ ಉಂಟು ಮಾಡುವ ಕಾರಣ ಕೂಡಲೇ ಸ್ಥಳೀಯ ಆಡಳಿತ ಇಂತಹ ಪ್ರದೇಶಗಳನ್ನು ಗುರುತಿಸಿ ಸೂಕ್ತ ಕ್ರಮ ಕೈಗೊಳ್ಳಲು ಸದಯ್ಯನಮಠದ ವೀರಗಂಗಾಧರ ಸ್ವಾಮೀಜಿ, ಡಾ.ಆರ್.ಆರ್.ನಾಯಿಕ, ಡಾ.ಸತೀಶ ರಾಠೋಡ, ವ್ಯಾಪಾರಸ್ಥರಾದ ಕೆ.ಎಸ್.ಕೋರಿ, ಕಾಶೀನಾಥ ಸಾಲಕ್ಕಿ, ಶಿವಾನಂದ ಅತನೂರ ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.