ADVERTISEMENT

ಇಟ್ಟಂಗಿಹಾಳ: ಲಾರಿಯೊಂದರಲ್ಲಿ ಸಾಗಿಸಲಾಗುತ್ತಿದ್ದ 71 ಆಕಳು, ಕರುಗಳ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 20 ಜುಲೈ 2021, 16:12 IST
Last Updated 20 ಜುಲೈ 2021, 16:12 IST
ಲಾರಿಯೊಂದರಲ್ಲಿ ಸಾಗಿಸಲಾಗುತ್ತಿದ್ದ 71 ಆಕಳು ಮತ್ತು ಆಕಳ ಕರುಗಳ ರಕ್ಷಣೆ
ಲಾರಿಯೊಂದರಲ್ಲಿ ಸಾಗಿಸಲಾಗುತ್ತಿದ್ದ 71 ಆಕಳು ಮತ್ತು ಆಕಳ ಕರುಗಳ ರಕ್ಷಣೆ   

ವಿಜಯಪುರ: ತಾಲ್ಲೂಕಿನ ಇಟ್ಟಂಗಿಹಾಳ ಗ್ರಾಮದಲ್ಲಿ ಮಂಗಳವಾರ ಲಾರಿಯೊಂದರಲ್ಲಿ ಸಾಗಿಸಲಾಗುತ್ತಿದ್ದ 71 ಆಕಳು ಮತ್ತು ಆಕಳ ಕರುಗಳನ್ನು ರಕ್ಷಿಸಲಾಗಿದೆ.

ರಕ್ಷಿಸಲಾಗಿರುವ ಎಲ್ಲ ಆಕಳು, ಆಕಳು ಕರುಗಳನ್ನು ಕಗ್ಗೋಡ ಗೋಶಾಲೆಗೆ ಸಾಗಿಸಲಾಗಿದೆ. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಜಿಲ್ಲಾಧಿಕಾರಿ.ಪಿ.ಸುನೀಲ್‌ಕುಮಾರ್‌ ಮಾರ್ಗದರ್ಶನದಲ್ಲಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಇಲಾಖೆ, ಮಹಾನಗರಪಾಲಿಕೆ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಆಕಳು, ಕರುಗಳನ್ನು ರಕ್ಷಣೆ ಮಾಡಿದ್ದಾರೆ.

ADVERTISEMENT

ಪಶುಪಾಲನೆ ಮತ್ತು ಪಶುವೈದ್ಯಕೀಯ ಇಲಾಖೆಯ ಉಪನಿರ್ದೇಶಕ ಪ್ರಾಣೇಶ್ ಜಹಗೀರದಾರ, ಸಹಾಯಕ ನಿರ್ದೇಶಕ ಎಂ. ಸಿ. ಅರಕೇರಿ, ಡಾ.ಉಮೇಶ ನಾಲಾ, ಡಾ. ಪ್ರಕಾಶ್ ಗೂಳಪ್ಪಗೋಳ, ಆನಂದ್ ದೇವರ ನಾವದಗಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.