
ಆಲಮೇಲ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಆಲಮೇಲ ತಾಲ್ಲೂಕು ಘಟಕಕ್ಕೆ ಅವಿರೋಧ ಆಯ್ಕೆ ನಡೆಯಿತು.
ಅಧ್ಯಕ್ಷರಾಗಿ ಅವಧೂತ ಬಂಡಗರ, ಉಪಾಧ್ಯಕ್ಷರಾಗಿ ಸಿದ್ದಾರಾಮ ಬಿರಾದಾರ, ಪ್ರಧಾನ ಕಾರ್ಯದರ್ಶಿಯಾಗಿ ಗುರು ಹಿರೇಮಠ, ಕಾರ್ಯದರ್ಶಿಯಾಗಿ ಸಿದ್ದು ಕೆರಿಗೊಂಡ, ಖಜಾಂಚಿಯಾಗಿ ಉಮೇಶ ಕಟಬರ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅಬ್ದುಲಗನಿ ದೇವರಮನಿ, ಸುನೀಲ ಉಪ್ಪಿನ, ಫಾರೂಕ್ ಸುಂಬಡ, ಮಲ್ಲಿಕಾರ್ಜುನ ತಳವಾರ, ಬಶೀರ ಅಹ್ಮದ ಮುಜಾವರ, ದತ್ತಾತ್ರೇಯ ಸೊನ್ನ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಜಿಲ್ಲಾ ಪದಾಧಿಕಾರಿಗಳಾದ ದೇವೇಂದ್ರ ಹೆಳವರ, ರಾಜು ಕೊಂಡಗೂಳಿ, ಸದ್ದಾಂ ಜಮಾದಾರ ಚುನಾವಣಾ ಉಸ್ತುವಾರಿಗಳಾಗಿ ಕಾರ್ಯನಿರ್ವಹಿಸಿದರು.
ನಿಕಟಪೂರ್ವ ಅಧ್ಯಕ್ಷ ಸೈಯದ ದೇವರಮನಿ, ಹಿರಿಯ ಪತ್ರಕರ್ತರಾದ ರಮೇಶ ಕತ್ತಿ ಅಮರ ನಾರಯಣಕರ, ಸಿದ್ದು ಹಿರೇಮಠ, ಕಸಾಪ ಅಧ್ಯಕ್ಷರಾದ ಶಿವಶರಣ ಗುಂದಗಿ, ತಾಲ್ಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಅಶೋಕ ಕೊಳಾರಿ, ರಮೇಶ ಗಂಗನಳಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.