ADVERTISEMENT

ಮುಂಬೈ ಟಾಟಾ ಮ್ಯಾರಥಾನ್‌: ವಿಸಿಜಿ ದಾಖಲೆ

ವಿಜಯಪುರ ಸೈಕ್ಲಿಂಗ್ ಗ್ರುಪ್‌ ಅಧ್ಯಕ್ಷ ಡಾ.ಮಹಾಂತೇಶ ಬಿರಾದಾರ ಮೆಚ್ಚುಗೆ

​ಪ್ರಜಾವಾಣಿ ವಾರ್ತೆ
Published 22 ಜನವರಿ 2026, 2:15 IST
Last Updated 22 ಜನವರಿ 2026, 2:15 IST
ಮುಂಬೈ ಟಾಟಾ ಮ್ಯಾರಥಾನ್ ನಲ್ಲಿ 42 ಕಿ.ಮೀ ವಿಭಾಗದಲ್ಲಿ ಭಾಗವಹಿಸಿದ್ದ ವಿಜಯಪುರ ಸೈಕ್ಲಿಂಗ್ ಗ್ರುಪ್‌ನ ಸದಸ್ಯರನ್ನು ಗ್ರುಪ್ ಅಧ್ಯಕ್ಷ ಡಾ.ಮಹಾಂತೇಶ ಬಿರಾದಾರ ಬುಧವಾರ ಸನ್ಮಾನಿಸಿದರು 
ಮುಂಬೈ ಟಾಟಾ ಮ್ಯಾರಥಾನ್ ನಲ್ಲಿ 42 ಕಿ.ಮೀ ವಿಭಾಗದಲ್ಲಿ ಭಾಗವಹಿಸಿದ್ದ ವಿಜಯಪುರ ಸೈಕ್ಲಿಂಗ್ ಗ್ರುಪ್‌ನ ಸದಸ್ಯರನ್ನು ಗ್ರುಪ್ ಅಧ್ಯಕ್ಷ ಡಾ.ಮಹಾಂತೇಶ ಬಿರಾದಾರ ಬುಧವಾರ ಸನ್ಮಾನಿಸಿದರು    

ವಿಜಯಪುರ: ವಿಜಯಪುರ ಸೈಕ್ಲಿಂಗ್ ಗ್ರುಪ್‌ನ 17 ಜನ ಸದಸ್ಯರು ಮುಂಬೈ ಟಾಟಾ ಮ್ಯಾರಥಾನ್‌ನಲ್ಲಿ 42 ಕಿ.ಮೀ ವಿಭಾಗದಲ್ಲಿ ಭಾಗವಹಿಸಿ, ಪೂರ್ಣಗೊಳಿಸಿರುವುದು ವಿಜಯಪುರದ ಕ್ರೀಡಾ ಇತಿಹಾಸದಲ್ಲಿಯೇ ವಿಶೇಷ ದಾಖಲೆಯ ಕ್ಷಣ ಎಂದು ಗ್ರುಪ್ ಅಧ್ಯಕ್ಷ ಡಾ.ಮಹಾಂತೇಶ ಬಿರಾದಾರ ಹೇಳಿದರು.

ಮುಂಬೈ ಟಾಟಾ ಮ್ಯಾರಥಾನ್ ನಲ್ಲಿ 42 ಕಿ.ಮೀ ವಿಭಾಗದಲ್ಲಿ ಭಾಗವಹಿಸಿದ ಸದಸ್ಯರನ್ನು ಬುಧವಾರ ಸನ್ಮಾನಿಸಿ,  ಅವರು ಮಾತನಾಡಿದರು.

ಈ ಹಿಂದೆ 70 ಮತ್ತು 80ರ ದಶಕದಲ್ಲಿ ನಗರದಲ್ಲಿ ಫುಟ್‌ಬಾಲ್ ಪ್ರಖ್ಯಾತ ಕ್ರೀಡೆ ಆಗಿತ್ತು. ಕ್ರಮೇಣ ಫುಟ್ಬಾಲ್ ಆಸಕ್ತಿ ಕಳೆದುಕೊಂಡು ಕ್ರಿಕೆಟ್ ಬೆಳೆದು ನಿಂತಿತ್ತು. ಇತ್ತೀಚೆಗೆ ಸೈಕ್ಲಿಂಗ್ ಮತ್ತು ಮ್ಯಾರಥಾನ್ ಓಟದ ಮೂಲಕ ಯುವಕರು ಹೆಚ್ಚು ಹೆಚ್ಚು ಆಕರ್ಷಣೆಯಲ್ಲಿ ತೊಡಗಿ ಓಟಗಳಲ್ಲಿ ಭಾಗವಹಿಸುವುದು ಮತ್ತು ಪರಿಸರ ರಕ್ಷಣೆಯಲ್ಲಿ ಮುಂದಾಗಿರುವುದು ವಿಶೇಷವಾಗಿದೆ ಎಂದರು.

ADVERTISEMENT

ಪ್ರೋಕ್ಯಾಂ ಸ್ಲ್ಯಾಂ ಎಂದರೆ, ಬೆಂಗಳೂರಿನಲ್ಲಿ ಟಿಸಿಎಚ್ 10ಕಿ.ಮೀ, ದೆಹಲಿಯ ವೇದಾಂತ ಹಾಫ್ ಮ್ಯಾರಥಾನ್ 21 ಕಿ.ಮೀ ಕಲ್ಕತ್ತಾದ ಟಾಟಾ ಸ್ಟೀಲ್ 25ಕಿ.ಮೀ ಓಟವನ್ನು ನಿಗದಿತ ಅವಧಿಯಲ್ಲಿ ಓಡಿದಾಗ ಮಾತ್ರ ಮುಂಬೈನ ಟಾಟಾ ಮ್ಯಾರಥಾನ 42ಕಿ.ಮೀ ಓಟಕ್ಕೆ ಪ್ರವೇಶ ಸಿಗುತ್ತದೆ. ಇದೀಗ ಈ ಮೂರು ಓಟಗಳನ್ನು ಮುಗಿಸಿ, ಕೊನೆಯದಾದ 42 ಕಿ.ಮೀ ಓಟವನ್ನು ವಿಸಿಜಿ ಸದಸ್ಯರಾದ ಕಲಬುರ್ಗಿಯ ಅಬಕಾರಿ ಇಲಾಖೆ ಸುಪರಿಟೆಂಡೆಂಟ್ ಸಂಗನಗೌಡ ಹೊಸಳ್ಳಿ, ಲೋಕಾಯುಕ್ತ ಸರ್ಕಲ್ ಇನ್‌ಸ್ಪೆಪೆಕ್ಟರ್ ನಿರಂಜನ ಪಾಟೀಲ, ಬೆಂಗಳೂರಿನ ಅಬಕಾರಿ ಇಲಾಖೆ ಇನ್‌ಸ್ಪೆಪೆಕ್ಟರ್ ಹಣಮಂತರಾಯ ಭೈರಗೊಂಡ, ಮುಧೋಳದ ಐ.ಆರ್.ಎಸ್ ಅಧಿಕಾರಿ ಪ್ರವೀಣ ಕಾತರಕಿ, ವಿಸಿಜಿ ಗ್ರುಪ್ ಮೇಲ್ವಿಚಾರಕ ಸೋಮಯ್ಯ ಮಠ ಗುರೂಜಿ, ಡಾ.ರಾಜು ಯಲಗೊಂಡ, ಅಮೋಘಸಿದ್ಧ ಬಸನಾಳ, ಶಿವಾನಂದ ಕುಂಬಾರ, ಸಂದೀಪ ಮಡಗೊಂಡ, ರವಿ ಭೈರವಾಡಗಿ, ಡಾ. ಪ್ರವೀಣ ಚೌರ, ವೀರೇಂದ್ರ ಗುಚ್ಚಟ್ಟಿ, ರಾಜಶೇಖರ ಔರಸಂಗ, ಶ್ರೀಕಾಂತ ಅಂಗಡಿ, ಲಗಮಣ್ಣ ಸಲಗರೆ, ಅನಿಲ ಸಾಲೋಟಗಿ, ರುದ್ರಗೌಡ ಪಾಟೀಲ ಅವರು ನಿಗದಿತ ಅವಧಿಯಲ್ಲಿ ಮುಗಿಸಿರುವುದು ಎಲ್ಲರೂ ಪ್ರೋಕ್ಯಾಂ ಸ್ಲ್ಯಾಂ ಗ್ರ್ಯಾಂಡ್ ಪ್ರಶಸ್ತಿಯನ್ನು ಪಡೆದಿದ್ದಾರೆ. ಇದು ವಿಶ್ವದ ಓಟದ ಸ್ಪರ್ಧೆಯಲ್ಲಿ ಪ್ರಮುಖ ಪ್ರಶಸ್ತಿಯಾಗಿದೆ ಎಂದರು.

ಕೋಟಿವೃಕ್ಷ ಅಭಿಯಾನ ಸಂಚಾಲಕ ಡಾ.ಮುರುಗೇಶ ಪಟ್ಟಣಶೆಟ್ಟಿ, ವಿ.ಸಿ.ಜಿ ಸದಸ್ಯರಾದ ಶಾಂತೇಶ ಕಳಸಗೊಂಡ, ಸಂಕೇತ ಬಗಲಿ, ಅಶ್ಪಾಕ ಮನಗೂಳಿ, ಅನೀಲ ಧಾರವಾಡಕರ, ಸಮೀರ ಬಳಗಾರ, ಗುರುಶಾಂತ ಕಾಪಸೆ, ಡಿ.ಕೆ.ತಾವಸೆ, ಸಂತೋಷ ಔರಸಂಗ, ಸಿದ್ದು ನಾಯ್ಕೋಡಿ, ವಿನಯಕುಮಾರ ಕಾಂಚಾಣಿ, ಉಮೇಶ ಮೆಟಗಾರ, ಶಿವಾನಂದ ಯರನಾಳ, ಶಿವಶಂಕರ ಸಿದ್ದಣ್ಣವರ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.