ADVERTISEMENT

ಹಳೆ ವೈಷಮ್ಯ: ವಳಸಂಗದಲ್ಲಿ ವ್ಯಕ್ತಿ ಭೀಕರ ಕೊಲೆ

​ಪ್ರಜಾವಾಣಿ ವಾರ್ತೆ
Published 2 ಜನವರಿ 2026, 7:45 IST
Last Updated 2 ಜನವರಿ 2026, 7:45 IST
<div class="paragraphs"><p>ಸಾವು&nbsp; (ಪ್ರಾತಿನಿಧಿಕ ಚಿತ್ರ)</p></div>

ಸಾವು  (ಪ್ರಾತಿನಿಧಿಕ ಚಿತ್ರ)

   

ಸೋಲಾಪುರ: ದಕ್ಷಿಣ ಸೋಲಾಪುರ ತಾಲ್ಲೂಕಿನ ವಳಸಂಗದಲ್ಲಿ ಬುಧವಾರ ವ್ಯಕ್ತಿಯೊಬ್ಬನನ್ನು ಹರಿತವಾದ ಚಾಕುವಿನಿಂದ ಹೊಟ್ಟೆಗೆ ಇರಿದು, ತಲೆಗೆ ಕಲ್ಲಿನಿಂದ ಹೊಡೆದು ಭೀಕರವಾಗಿ ಹತ್ಯೆ ಮಾಡಲಾಗಿದೆ.  

ಹತ್ಯೆಯಾದ ವ್ಯಕ್ತಿ ಲಕ್ಷ್ಮಣ ವಾಘಮಾರೆ (33) ಎಂದು ತಿಳಿದುಬಂದಿದೆ. ವಳಸಂಗ ಗ್ರಾಮದ ಶ್ರೀ ಸಿದ್ಧೇಶ್ವರ ಮಂದಿರದ ಚೌಕದ ಬಳಿ ವೈಯಕ್ತಿಕ ವೈಷಮ್ಯದಿಂದ ಕೊಲೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಆರೋಪಿ ರವಿ ಫಟಕೆ (37) ಎಂಬಾತ  ಚಾಕುವಿನಿಂದ ಇರಿದು ಲಕ್ಷ್ಮಣ ವಾಘಮಾರೆ ಅವರನ್ನು ಹತ್ಯೆ ಮಾಡಿದ ನಂತರ ತಾನೇ ವಳಸಂಗ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ.

ಘಟನೆಯ ಮಾಹಿತಿ ದೊರಕುತ್ತಿದ್ದಂತೆ ಸಹಾಯಕ ಪೊಲೀಸ್ ನಿರೀಕ್ಷಕ ರಾಹುಲ ಡೋಂಗರೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಕ್ಕಲಕೋಟ ಉಪವಿಭಾಗಿಯ ಪೊಲೀಸ್ ಅಧಿಕಾರಿ ವಿಲಾಸ ಯಾಮಾವರ ಸ್ಥಳದಲ್ಲಿ ಪೊಲೀಸ್ ಬಂದೋಬಸ್ತ್ ಹೆಚ್ಚಿಸಿದ್ದಾರೆ. ವಳಸಂಗ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.