ADVERTISEMENT

ನಕಲಿ ರಸಗೊಬ್ಬರ ದಾಸ್ತಾನು: ರೈತರಿಂದಲೇ ದಾಳಿ!

​ಪ್ರಜಾವಾಣಿ ವಾರ್ತೆ
Published 21 ಜೂನ್ 2021, 22:01 IST
Last Updated 21 ಜೂನ್ 2021, 22:01 IST
ಇಂಡಿ ತಾಲ್ಲೂಕಿನ ಇಂಗಳಗಿ ಗ್ರಾಮದ ಹೊರವಲಯದಲ್ಲಿ ದಾಸ್ತಾನು ಮಾಡಿದ್ದ ನಕಲಿ ಗೊಬ್ಬರ ವಶಪಡಿಸಿಕೊಂಡ ರೈತರು, ಅಧಿಕಾರಿಗಳು
ಇಂಡಿ ತಾಲ್ಲೂಕಿನ ಇಂಗಳಗಿ ಗ್ರಾಮದ ಹೊರವಲಯದಲ್ಲಿ ದಾಸ್ತಾನು ಮಾಡಿದ್ದ ನಕಲಿ ಗೊಬ್ಬರ ವಶಪಡಿಸಿಕೊಂಡ ರೈತರು, ಅಧಿಕಾರಿಗಳು   

ಇಂಡಿ: ಅಕ್ರಮ ದಾಸ್ತಾನು ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದ ರೈತರು, ನಕಲಿ ರಸಗೊಬ್ಬರ ದಾಸ್ತಾನು ಮಳಿಗೆ ಮೇಲೆ ತಾವೇ ದಾಳಿ ಮಾಡಿದ ಘಟನೆ ಇಂಡಿ ತಾಲ್ಲೂಕಿನ ಇಂಗಳಗಿ ಗ್ರಾಮದಲ್ಲಿ ಸೋಮವಾರ ನಡೆದಿದೆ.

ಗೊಬ್ಬರ ಮಾರಾಟ ಪರವಾನಗಿ ಪಡೆದಿದ್ದ ವ್ಯಕ್ತಿ ನಕಲಿ ಗೊಬ್ಬರ ದಾಸ್ತಾನು ಮಾಡಿದ್ದ ಬಗ್ಗೆ ಖಚಿತ ಮಾಹಿತಿ ಸಂಗ್ರಹಿಸಿದ ರೈತರು ದಾಳಿ ನಡೆಸಿ, ನಂತರ ಕೃಷಿ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದಾರೆ. ನಕಲಿ ಗೊಬ್ಬರ ವಶಕ್ಕೆ ಪಡೆದ ಅಧಿಕಾರಿಗಳು, ಪರವಾನಗಿ ರದ್ದುಪಡಿಸುವ ಭರವಸೆನೀಡಿದ್ದಾರೆ.

‘ನಕಲಿ ಗೊಬ್ಬರ ಅಡ್ಡೆಗಳ ಮೇಲೆ ದಾಳಿ ಮಾಡಿ ‍ಪರವಾನಗಿದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ತಾಲ್ಲೂಕು ಆಡಳಿತದ ವಿರುದ್ಧ ಹೋರಾಟ ಮಾಡಲಾಗುವುದು’ ಎಂದು ರೈತ ಮುಖಂಡ ಗುರಪ್ಪ ಅಗಸರ ಎಚ್ಚರಿಕೆ ನೀಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.