ADVERTISEMENT

ಶರಣ ಬಳಗದ ತಿಂಗಳ ಪಾದಯಾತ್ರೆ ಶ್ಲಾಘನೀಯ: ಈರಣ್ಣ ಚ.ಪಟ್ಟಣಶೆಟ್ಟಿ

ಬಸವ ಸಂಸ್ಕೃತಿ ಅಭಿಯಾನದ ಪಾದಯಾತ್ರೆ ಸಮಾರೋಪ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2025, 5:34 IST
Last Updated 25 ಆಗಸ್ಟ್ 2025, 5:34 IST
ಬಸವನಬಾಗೇವಾಡಿ ಪಟ್ಟಣದ ವಿರಕ್ತಮಠದಲ್ಲಿ ಭಾನುವಾರ ಶ್ರಾವಣ ಮಾಸದ ಶರಣಬಳಗದ ಶರಣ ವೃತ್ತ ಹಾಗೂ ಬಸವ ಸಂಸ್ಕ್ರತಿ ಅಭಿಯಾನದ ಜಾಗೃತಿ ಪಾದಯಾತ್ರೆಯ ಸಮಾರೋಪ ಸಮಾರಂಭ ಜರುಗಿತು.
ಬಸವನಬಾಗೇವಾಡಿ ಪಟ್ಟಣದ ವಿರಕ್ತಮಠದಲ್ಲಿ ಭಾನುವಾರ ಶ್ರಾವಣ ಮಾಸದ ಶರಣಬಳಗದ ಶರಣ ವೃತ್ತ ಹಾಗೂ ಬಸವ ಸಂಸ್ಕ್ರತಿ ಅಭಿಯಾನದ ಜಾಗೃತಿ ಪಾದಯಾತ್ರೆಯ ಸಮಾರೋಪ ಸಮಾರಂಭ ಜರುಗಿತು.   

ಬಸವನಬಾಗೇವಾಡಿ: ಬಸವ ಸಂಸ್ಕೃತಿ ಅಭಿಯಾನದ ಯಶಸ್ವಿಗಾಗಿ ವಿರಕ್ತಮಠದ ಸಿದ್ದಲಿಂಗ ಶ್ರೀಗಳ ನೇತೃತ್ವದ ಸರ್ವ ಶರಣ ಬಳಗ ಪಟ್ಟಣದ ಪ್ರತಿ ವಾರ್ಡ್, ಓಣಿಗಳಲ್ಲಿ‌ ತಿಂಗಳು ಪೂರ್ತಿ ಪಾದಯಾತ್ರೆ ಮಾಡಿ ಸಲ್ಲಿಸಿದ ಪ್ರಚಾರಸೇವೆ ಶ್ಲಾಘನೀಯ ಎಂದು ಶ್ರೀ‌ ಬಸವೇಶ್ವರ ಸೇವಾ ಸಮಿತಿ ಅಧ್ಯಕ್ಷ ಈರಣ್ಣ ಚ.ಪಟ್ಟಣಶೆಟ್ಟಿ ಹೇಳಿದರು.

ಪಟ್ಟಣದ ವಿರಕ್ತಮಠದಲ್ಲಿ ಭಾನುವಾರ ಶ್ರಾವಣ ಮಾಸದ ಶರಣಬಳಗದ ಶರಣ ವೃತ್ತ ಹಾಗೂ ಬಸವ ಸಂಸ್ಕ್ರತಿ ಅಭಿಯಾನದ ಜಾಗೃತಿ ಪಾದಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಸಿದ್ದಲಿಂಗ ಸ್ವಾಮೀಜಿಗಳ ನೇತೃತ್ವದಲ್ಲಿ ನೂರಾರು ಶರಣಬಂಧುಗಳು ಪಟ್ಟಣ ಪ್ರತಿ ವಾರ್ಡ್‌ನಲ್ಲಿ ಬೆಳಿಗ್ಗೆ ಪಾದಯಾತ್ರೆ ಮಾಡುವ ಜೊತೆಗೆ ಇಷ್ಟಲಿಂಗ ಪೂಜೆ ಮಹತ್ವ, ಶರಣರ ಅನುಭಾವ, ಚಿಂತನೆಗಳನ್ನು ಜನರಿಗೆ ತಲುಪಿಸಿ ಸೆ.1ರ ಬಸವ ಸಂಸ್ಕೃತಿ ಅಭಿಯಾನದಲ್ಲಿ ಭಾಗವಹಿಸುವಂತೆ ಪ್ರೇರಣೆ ನೀಡಿರುವುದು ಸಂತಸದ ವಿಚಾರ ಎಂದರು.

ADVERTISEMENT

ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ, ಶಿಕ್ಷಕಿ ಪುಷ್ಪಾ ರವಿಗೌಡ ಚಿಕ್ಕೊಂಡ ಮಾತನಾಡಿದರು.

ಸಮಾರಂಭದಲ್ಲಿ ಶರಣ ಬಳಗದ ಸಂಗನಗೌಡ ಚಿಕ್ಕೊಂಡ, ಎಂ.ಜಿ.ಆದಿಗೊಂಡ, ವಿವೇಕಾನಂದ ಕಲ್ಯಾಣಶೆಟ್ಟಿ, ಎಸ್.ಎಸ್.ಝಳಕಿ, ಸಿದ್ದಣ್ಣ ಕಲ್ಲೂರ ಮಾತನಾಡಿದರು. 

ಬಸವನಬಾಗೇವಾಡಿ ಪಟ್ಟಣದ ವಿರಕ್ತಮಠದಲ್ಲಿ ಭಾನುವಾರ ಶ್ರಾವಣ ಮಾಸದ ಶರಣಬಳಗದ ಶರಣ ವೃತ್ತ ಹಾಗೂ ಬಸವ ಸಂಸ್ಕ್ರತಿ ಅಭಿಯಾನದ ಜಾಗೃತಿ ಪಾದಯಾತ್ರೆಯ ಸಮಾರೋಪ ಸಮಾರಂಭ ಜರುಗಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.