ADVERTISEMENT

ವೀರಶೈವ ಜಾತಿಯಲ್ಲ, ವಿಶ್ವಧರ್ಮ: ಎಸ್.ಎಲ್. ನಿಂಬರಗಿಮಠ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2026, 2:27 IST
Last Updated 2 ಮಾರ್ಚ್ 2026, 2:27 IST
ಇಂಡಿ ನಗರದ ಸಿಂದಗಿ ರಸ್ತೆಯಲ್ಲಿರುವ ರೇಣುಕಾಚಾರ್ಯ ವೃತ್ತದಲ್ಲಿ ರೇಣುಕಾಚಾರ್ಯ ಜಯಂತ್ಯುತ್ಸವದ ನಿಮಿತ್ತ ಅವರ ಮೂರ್ತಿ ಪೂಜೆ ಸಲ್ಲಿಸಲಾಯಿತು
ಇಂಡಿ ನಗರದ ಸಿಂದಗಿ ರಸ್ತೆಯಲ್ಲಿರುವ ರೇಣುಕಾಚಾರ್ಯ ವೃತ್ತದಲ್ಲಿ ರೇಣುಕಾಚಾರ್ಯ ಜಯಂತ್ಯುತ್ಸವದ ನಿಮಿತ್ತ ಅವರ ಮೂರ್ತಿ ಪೂಜೆ ಸಲ್ಲಿಸಲಾಯಿತು   

ಇಂಡಿ: ‘ವೀರಶೈವ ಎನ್ನುವುದು ಕೇವಲ ಒಂದು ಜಾತಿಯಲ್ಲ, ಅದೊಂದು ಪರಿಪೂರ್ಣ ವಿಶ್ವಧರ್ಮವಾಗಿದೆ’ ಎಂದು ಹಿರಿಯ ವಕೀಲ ಎಸ್.ಎಲ್. ನಿಂಬರಗಿಮಠ ಹೇಳಿದರು.

ಅವರು ನಗರದ ಸಿಂದಗಿ ರಸ್ತೆಯಲ್ಲಿರುವ ರೇಣುಕಾಚಾರ್ಯ ವೃತ್ತದಲ್ಲಿ ಭಾನುವಾರ ಆಯೋಜಿಸಿದ್ದ ರೇಣುಕಾಚಾರ್ಯ ಜಯಂತ್ಯುತ್ಸವದಲ್ಲಿ ರೇಣುಕಾಚಾರ್ಯ ಮೂರ್ತಿಗೆ ಪೂಜೆ ಸಲ್ಲಿಸಿ, ಮಾತನಾಡಿದರು.

‘ರೇಣುಕಾಚಾರ್ಯರು ಅವರು ಮಹಾತಪಸ್ವಿ. ಅಗಸ್ತ್ಯಮುನಿಗೆ ವೀರಶೈವ ಧರ್ಮದ ತತ್ತ್ವ ಸಿದ್ಧಾಂತ ಮತ್ತು ಆಚರಣೆಗಳನ್ನು ಬೋಧಿಸಿ ಜೀವನ್ಮುಕ್ತಿಯನ್ನು ತಿಳಿಸಿಕೊಟ್ಟಿದ್ದಾರೆ’ ಎಂದರು.

ADVERTISEMENT

ಅಕ್ಕಮಹಾದೇವಿ ಸೌಹಾರ್ದ ಸಂಘದ ನಿರ್ದೇಶಕ ಶಿವಾನಂದ ಮಠಪತಿ ಮಾತನಾಡಿ, ‘ಜಪ- ಧ್ಯಾನ- ಪೂಜೆ ಸೇರಿದಂತೆ ರೇಣುಕಾಚಾರ್ಯರು ಬೋಧಿಸಿದ ದಶ ಧರ್ಮ ಸೂತ್ರಗಳನ್ನು ಅನುಸರಿಸಿದಲ್ಲಿ ಬದುಕು ಸಾರ್ಥಕವಾಗುತ್ತದೆ’ ಎಂದರು.

ಸೋಮು ನಿಂಬರಗಿಮಠ, ಅಜಿತ್ ಹಿರೇಮಠ, ಬಸಯ್ಯ ಪತ್ರೀಮಠ, ಉದಯ್ ಮಠಪತಿ, ಬಾಲಸಂಗಯ್ಯ ಘಾಳಿಮಠ, ಶಾಂತಯ್ಯ ಗಚ್ಚಿನಮಠ, ರಾಜು ಹಿರೇಮಠ, ಎಂ.ಆರ್. ಹಿರೇಮಠ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.