ADVERTISEMENT

‘ತನೈರಾ’ ಕರಕುಶಲ ಸೀರೆ ಪ್ರದರ್ಶನ

ವಿಜಯಪುರದಲ್ಲಿ ಪ್ರಥಮ ಬಾರಿಗೆ ಆಯೋಜನೆ; ಶೇ30ರ ವರೆಗೆ ರಿಯಾಯಿತಿ

​ಪ್ರಜಾವಾಣಿ ವಾರ್ತೆ
Published 21 ಜನವರಿ 2021, 13:17 IST
Last Updated 21 ಜನವರಿ 2021, 13:17 IST
ಟಾಟಾ ಕಂಪನಿಯ ಯುವ ಬ್ರ್ಯಾಂಡ್ ಆಗಿರುವ ತನೈರಾ ಕರಕುಶಲ ಸೀರೆಗಳ ಪ್ರದರ್ಶನ (ಸಂಗ್ರಹ ಚಿತ್ರ)
ಟಾಟಾ ಕಂಪನಿಯ ಯುವ ಬ್ರ್ಯಾಂಡ್ ಆಗಿರುವ ತನೈರಾ ಕರಕುಶಲ ಸೀರೆಗಳ ಪ್ರದರ್ಶನ (ಸಂಗ್ರಹ ಚಿತ್ರ)   

ವಿಜಯಪುರ: ಟಾಟಾ ಕಂಪನಿಯ ಯುವ ಬ್ರ್ಯಾಂಡ್ ಆಗಿರುವ ‘ತನೈರಾ’ದಿಂದ ಕರಕುಶಲ ಸೀರೆಗಳು ಮತ್ತು ಲೆಹಾಂಗಾಗಳ ಪ್ರದರ್ಶನ ಹಾಗೂ ಮಾರಾಟ ಮೇಳ ಜ.23 ರಿಂದ 26ರ ವರೆಗೆ ನಗರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ತನೈರಾ ದಕ್ಷಿಣ ವಿಭಾಗದ ವ್ಯವಹಾರ ವ್ಯವಸ್ಥಾಪಕಿಪೂರಬಿ ಚಂದಾ ತಿಳಿಸಿದರು.

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಸಿದ್ದೇಶ್ವರ ಗುಡಿ ಎದುರಿನ ಗುರುಕುಲ ರಸ್ತೆಯ ಕಾಮಧೇನು ಮಾಲ್‌ನಲ್ಲಿರುವ ‘ತನಿಷ್ಕ್‌’ ಚಿನ್ನಾಭರಣ ಶೋರೂಂನಲ್ಲಿ ನಾಲ್ಕು ದಿನಗಳ ಕಾಲ ಬೆಳಿಗ್ಗೆ 10.30ರಿಂದ ಪ್ರದರ್ಶನ, ಮಾರಾಟ ಆರಂಭವಾಗಲಿದೆ ಎಂದು ಹೇಳಿದರು.

ತನೈರ ಸೀರೆ ಪ್ರದರ್ಶನ ಮತ್ತು ಮಾರಾಟದಲ್ಲಿ ಆಯ್ದ ಶ್ರೇಣಿಯ ಉತ್ಪನ್ನಗಳಿಗೆ ಶೇ 30ರ ವರೆಗೆ ರಿಯಾಯಿತಿ ನೀಡಲಾಗುವುದು ಎಂದು ಹೇಳಿದರು.

ADVERTISEMENT

ತನೈರದ ಲೆಹೆಂಗಾಗಳ ವಿಶೇಷ ಸಂಗ್ರಹ ಮತ್ತು ಬನಾರಸ್‌, ಚಂದೇರಿ, ಮಹೇಶ್ವರಿ, ಬಂಗಾಳ, ಬಾಗಲ್ಪುರ, ಕಾಂಜೀವರಂ ಸೇರಿದಂತೆ ಕೈಯಿಂದ ನೇಯ್ದಿರುವ ದಕ್ಷಿಣ ಭಾರತದ ಪ್ರಸಿದ್ಧ ಬ್ರ್ಯಾಂಡ್‌ಗಳ 1500 ಸೀರೆಗಳ ವಿಶೇಷ ಪ್ರದರ್ಶನದಲ್ಲಿ ಇರಲಿದೆ ಎಂದು ಹೇಳಿದರು.

ದೇಶದ ವಿವಿಧ ಭಾಗಗಳಲ್ಲಿ ಸಿದ್ಧಗೊಂಡಿರುವ ಮತ್ತು ಸಂಸ್ಥೆಯ ಸ್ವಂತ ವಿನ್ಯಾಸದ ಹಬ್ಬದ ಮತ್ತು ವಧುವಿನ ಸಿಂಗಾರದ ಸೀರೆಗಳನ್ನು ವಿಶೇಷವಾಗಿ ಪ್ರದರ್ಶಿಸಲಾಗುವುದು ಎಂದರು.

ದುರ್ಗಾ, ಲಕ್ಷ್ಮಿ ಮತ್ತು ಸರಸ್ವತಿ ದೇವತೆಗಳ ಸಂಸ್ಕೃತಿ ಮತ್ತು ವಿನ್ಯಾಸದಿಂದ ಪ್ರೇರಣೆ ಪಡೆದು ಸಿದ್ಧಪಡಿಸಿರುವ ತನೈರಾದ ಹೊಸ ಸೇರ್ಪಡೆಯಾದ ‘ತಸ್ವಿ’ ಈ ಪ್ರದರ್ಶನದ ಪ್ರಮುಖ ಆಕರ್ಷಣೆಯಾಗಿದೆ ಎಂದು ಹೇಳಿದರು.

ಲಿನೆನ್‌ನಿಂದ ತಯಾರಿಸಿದ ಆಕರ್ಷಕ ಮತ್ತು ಸೊಗಸಾದ ಕುರ್ತಾ ಸೆಟ್‌ಗಳು, ಕೈಮಗ್ಗದ ಶುದ್ಧ ರೇಷ್ಮೆ ಸೀರೆಗಳು, ಮೃದು ರೇಷ್ಮೆ ಬಣ್ಣದ ಸೀರೆಗಳು, ಡ್ರೆಸ್‌ ಮೆಟಿರಿಯಲ್ಸ್‌, ಧರಿಸಲು ಸಿದ್ಧ ರವಿಕೆಗಳು, ಮುಖಗವಸು, ಸ್ಟೋಲ್‌ ಹಾಗೂ ದುಪಟ್ಟಾಗಳು ಪ್ರದರ್ಶನದಲ್ಲಿ ಇರಲಿವೆ ಎಂದರು.

ತನೈರದ ಪ್ರಮುಖರಾದ ಶ್ರೀಕಾಂತ ಶಿರಡೋಣ, ರಮೇಶ ಶಿರಡೋಣ, ಸಿದ್ದರಾಮಪ್ಪ ಚಡಚಣ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.