ADVERTISEMENT

ಹುಲಿ, ಕೃಷ್ಣಮೃಗ ಚರ್ಮ, ಉಗುರು ವಶ: ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2020, 8:02 IST
Last Updated 21 ಅಕ್ಟೋಬರ್ 2020, 8:02 IST
ಅರಣ್ಯ ಇಲಾಖೆ ಅಧಿಕಾರಿಗಳು ಆರೋಪಿ ಮಹೇಶ ಹಿರೇಮಠ ಎಂಬಾತನನ್ನು ಬಂಧಿಸಿದ್ದಾರೆ.
ಅರಣ್ಯ ಇಲಾಖೆ ಅಧಿಕಾರಿಗಳು ಆರೋಪಿ ಮಹೇಶ ಹಿರೇಮಠ ಎಂಬಾತನನ್ನು ಬಂಧಿಸಿದ್ದಾರೆ.   

ವಿಜಯಪುರ: ನಗರದಲ್ಲಿ ಹುಲಿ ಮತ್ತು ಕೃಷ್ಣ ಮೃಗದ ಚರ್ಮ ಹಾಗೂ ಹುಲಿಯ ಎರಡು ಉಗುರುಗಳನ್ನು ಮನೆಯೊಂದರಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟುಕೊಂಡಿದ್ದ ಖಚಿತ ಮಾಹಿತಿ‌ ಮೇರೆಗೆ ದಾಳಿ ನಡೆಸಿದ ಅರಣ್ಯ ಇಲಾಖೆ ಅಧಿಕಾರಿಗಳ ತಂಡ, ಆರೋಪಿ ಮಹೇಶ ಹಿರೇಮಠ ಎಂಬಾತನನ್ನು ಬಂಧಿಸಿದೆ.

ಆರೋಪಿ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ಡಿಎಫ್‌ಒ ಅಶೋಕ ಪಾಟೀಲ ತಿಳಿಸಿದ್ದಾರೆ.

ಕಾರ್ಯಶಚರಣೆಯಲ್ಲಿ ಎಸಿಎಫ್ ಬಿ.ಪಿ.ಚವ್ಹಾಣ, ವಲಯ ಅರಣ್ಯ ಅಧಿಕಾರಿ ಪ್ರಭುಲಿಂಗ ಭುಯ್ಯಾರ, ಉಪ ವಲಯ ಅರಣ್ಯಾಧಿಕಾರಿ ಗುರು ಲೋಣಿ, ಸಿಬ್ಬಂದಿಗಳಾದ ಮಹಾದೇವಿ‌ ನಿಡಗುಂದಿ ಮಠ, ಬಸಮ್ಮ ಗೋನಾಳ, ಶಿವಾನಂದ ಮೇತ್ರಿ, ರವಿ ರಾಠೋಡ, ಆರ್.ಎಚ್. ಜಮಾದಾರ, ಅನೀಲ ಲೋಣಿ, ಸಿ.ಎಂ.ಪಟ್ಟಣಶಟ್ಟಿ, ಪ್ರವೀಣ ಅಂಗಡಿ ಪಾಲ್ಗೊಂಡಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.