ADVERTISEMENT

ವಿಜಯಪುರ: ಅಕ್ರಮ ಇಟ್ಟಿಗೆ ಭಟ್ಟಿಗಳ ನಿಯಂತ್ರಣ ಯಾವಗ?

ಅಲ್ಲಮಪ್ರಭು ಕರ್ಜಗಿ
Published 26 ನವೆಂಬರ್ 2025, 5:15 IST
Last Updated 26 ನವೆಂಬರ್ 2025, 5:15 IST
25ಸಿಡಿಎನ್01‌ ವಿಜಯಪುರ - ಸೋಲಾಪುರ ರಾಷ್ಟ್ರೀಯ  ಹೆದ್ದಾರಿಗೆ ಹೊಂದಿಕೊಂಡಿರುವ ಧೂಳಖೇಡ ಗ್ರಾಮದ ಹತ್ತಿರ  ಇಟ್ಟಿಗೆ ಭಟ್ಟಿಯಿಂದ ವಾಹನ ಸವಾರಿರಿಗೆ ತೊಂದರೆ ಉಂಟಾಗುತ್ತಿದೆ
25ಸಿಡಿಎನ್01‌ ವಿಜಯಪುರ - ಸೋಲಾಪುರ ರಾಷ್ಟ್ರೀಯ  ಹೆದ್ದಾರಿಗೆ ಹೊಂದಿಕೊಂಡಿರುವ ಧೂಳಖೇಡ ಗ್ರಾಮದ ಹತ್ತಿರ  ಇಟ್ಟಿಗೆ ಭಟ್ಟಿಯಿಂದ ವಾಹನ ಸವಾರಿರಿಗೆ ತೊಂದರೆ ಉಂಟಾಗುತ್ತಿದೆ   

ಚಡಚಣ: ತಾಲ್ಲೂಕಿನ ಧೂಳಖೇಡ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಲವಾರು ಅನಧಿಕೃತ ಇಟ್ಟಿಗೆ ಭಟ್ಟಿಗಳು ತಲೆ ಎತ್ತಿವೆ. ಸಂಬಂಧಿಸಿದ ಇಲಾಖೆಯಿಂದ ಅನುಮತಿ ಪಡೆದುಕೊಂಡಿಲ್ಲ. ಮುಖ್ಯ ರಸ್ತೆಯ ಪಕ್ಕದಲ್ಲಿಯೇ ಈ ಬಟ್ಟಿಗಳು ರಾಜಾರೋಷವಾಗಿಕಾರ್ಯ ನಿರ್ವಹಿಸುತ್ತಿರುವದರಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದೆ.

ಚಳಿಗಾಲ ಮತ್ತು ಬೇಸಿಗೆ ಸಮೀಪಿಸಿದಾಗ ಇಟ್ಟಿಗೆ ಭಟ್ಟಿಗಳ ತಯಾರಿಕಾ ಕಾರ್ಯ ಜೋರಾಗಿರುತ್ತದೆ. ಭೀಮಾ ನದಿ ತೀರದಲ್ಲಿನ ಫಲವತ್ತಾದ ಮಣ್ಣು ತಂದು ಸಂಗ್ರಹಿಸಿಟ್ಟುಕೊಂಡು ಇಟ್ಟಿಗಳನ್ನು ತಯಾರಿಸಲಾಗುತ್ತಿದೆ. ಈ ಮಣ್ಣು ಸಾಗಿಸುವಾಗ ಲಾರಿಗಳ ಹಿಂಬದಿ ಸಂಚರಿಸುವ ವಾಹನ ಚಾಲಕರು ಜೀವ ಕೈಯಲ್ಲಿ ಹಿಡಿದುಕೊಂಡು ಸಾಗಬೇಕಾಗಿದೆ. ಧೂಳು ಮತ್ತು ಹೊಗೆಯಿಂದ ವಾಯು ಮಾಲಿನ್ಯ ಹೆಚ್ಚಾಗುತ್ತಿದ್ದು,ಇದು ಸುತ್ತಮುತ್ತಲು ವಾಸಿಸುವ ಜನರ ಅರೋಗ್ಯದ ಮೇಲೆ ದುಷ್ಪರಿಣಾಮ ಬಿಳುತ್ತದೆ.

ಸರ್ಕಾರದ ನಿಯಮಾವಳಿ ಉಲ್ಲಂಘಿಸಿ ಇಟ್ಟಿಗೆ ಭಟ್ಟಿ ನಡೆಸುತ್ತದ್ದರೂ ಅಧಿಕಾರಿಗಳು ಮೌನಕ್ಕೆ ಶರಣಾಗಿರುವದು ವಿಪರ್ಯಾಸ. ಇಟ್ಟಿಗೆ ಭಟ್ಟಿ ಮಾಲೀಕರು ಕಾನೂನು ಗಾಳಿಗೆ ತೂರಿ ರಾಜರೋಷವಾಗಿ ಯಾವುದೇ ಪರವಾನಗಿ ಇಲ್ಲದೆ ಇಟ್ಟಿಗೆ ತಯಾರಿಸಿ ಮಾರಾಟ ಮಾಡುವದರಿಂದ ಪ್ರತಿ ವರ್ಷ ಸರ್ಕಾರಕ್ಕೆ ಲಕ್ಷಾಂತರ ರೂಪಾಯ ನ್ಷಟವೂ ಉಂಟಾಗುತ್ತಿದೆ. ಇನ್ನಾದರೂ ಅಕ್ರಮವಾಗಿ ಭಟ್ಟಿಗಳ ನಿಯಂತ್ರಣಕ್ಕೆ ಸಂಬಂದಿಸಿದ ಅಧಿಕಾರಿಗಳು ಮನ ಹರಿಸಿ ಈ ಭಟ್ಟಿಗಳ ನಿಂಯಂತ್ರಣಕ್ಕೆ ಮುಂದಾಗುವರೇ ಎಂಬುದನ್ನು ಕಾದು ನೋಡಬೇಕಿದೆ.

ADVERTISEMENT

ಅನಧಿಕೃತವಾಗಿ ನಡೆಯುವ ಇಟ್ಟಿಗೆ ಭಟ್ಟಿಗಳ ಕುರಿತು ಪರಿಶೀಲನೆ ಮಾಡಲಾಗುವುದು. ಅಕ್ರಮವಾಗಿ ನಡೆಯುವ ಇಟ್ಟಿಗೆ ಭಟ್ಟಿಗಳಿ ಕಡಿವಾಣ ಹಾಕಲಾಗುವದು

ಸಂಜಯ ಇಂಗಳೆ, ತಹಶೀಲ್ದಾರ ಚಡಚಣ

ಅನುಮತಿ ಇಲ್ಲದೆ ಕಾನೂನು ಬಾಹಿರವಾಗಿ ಅನಧಿಕೃತವಾಗಿ ನಡೆಯುವ ಇಟ್ಟಿಗೆ ಭಟ್ಟಿ ವಿರುದ್ಧ ಕ್ರಮಕ್ಕೆ ಸಂಬಂಧ ಪಟ್ಟ ಅಧಿಕಾರಿಗಳು ಮುಂದಾಗಬೇಕು

ರಾಜಕುಮಾರ ಬಿರಾದಾರ, ಗ್ರಾ.ಪಂ ಮಾಜಿ ಸದಸ್ಯ ಧೂಳಖೇಡ

25ಸಿಡಿಎನ್-02‌  ಚಡಚಣ ಸಮೀಪದ ಶಿರನಾಳ ರಸ್ತೆಯಲ್ಲಿ ಇಟ್ಟಿಗೆ ಭಟಿಗೆ ತಯಾರಿಕೆಗೆ ಸಾಗುತ್ತಿರುವ ವಾಹನ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.