ADVERTISEMENT

ವಿಜಯಪುರ | ನ್ಯಾಯಾಧೀಶರ ಮನೆಯಲ್ಲಿ ಕಳವು: ಆರೋಪಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2025, 12:28 IST
Last Updated 9 ಅಕ್ಟೋಬರ್ 2025, 12:28 IST
<div class="paragraphs"><p>ರಾಹುಲ ಲಮಾಣಿ,&nbsp;ಚೇತನ ಲಮಾಣಿ,&nbsp;ಸುನೀಲ ರಜಪೂತ</p></div>

ರಾಹುಲ ಲಮಾಣಿ, ಚೇತನ ಲಮಾಣಿ, ಸುನೀಲ ರಜಪೂತ

   

ವಿಜಯಪುರ: ಮುದ್ದೇಬಿಹಾಳ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರ ಬಾಡಿಗೆ ಮನೆಯ ಬೀಗ ಮುರಿದು ಅಂದಾಜು ₹30,14,500 ಮೌಲ್ಯದ ಬಂಗಾರ ಹಾಗೂ ಬೆಳ್ಳಿ ಆಭರಣಗಳನ್ನು ಕಳವು ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ವಿಜಯಪುರ ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ.

ಬೆಳಗಾವಿ ಜಿಲ್ಲೆ ರಾಮದುರ್ಗ ತಾಲ್ಲೂಕಿನ ರಾಮಾಪುರ ತಾಂಡಾ 2ರ ಸುನೀಲ ರಜಪೂತ(28), ನಾಗನೂರ ತಾಂಡಾದ ಚೇತನ ಲಮಾಣಿ(28) ಮತ್ತು ಸವದತ್ತಿ ತಾಲ್ಲೂಕಿನ ಕಾರ್ಲಕಟ್ಟಿಯ ರಾಹುಲ ಲಮಾಣಿ(23) ಬಂಧಿತ ಆರೋಪಿಗಳಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.

ADVERTISEMENT

ಬಂಧಿತ ಆರೋಪಿಗಳಿಂದ 250 ಗ್ರಾಂ ಬಂಗಾರದ ಆಭರಣಗಳು, 50 ಗ್ರಾಂ ಬೆಳ್ಳಿಯ ಆಭರಣಗಳು, ಹಾಗೂ ಕೃತ್ಯ ಎಸಗಲು ಬಳಸಿದ 2 ಕಾರು, 2 ಬೈಕ್‌, 4 ಮೊಬೈಲ್ ಪೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು. 

ಮುದ್ದೇಬಿಹಾಳ ಪಟ್ಟಣದ ಹುಡ್ಕೊ ಕಾಲೊನಿಯಲ್ಲಿ ಕಳೆದ ಆಗಸ್ಟ್‌ 24 ರಂದು ನ್ಯಾಯಾಧೀಶರ ಮನೆ ಕಳುವಾಗಿತ್ತು. ಈ ಸಂಬಂಧ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ವಿಶೇಷ ತನಿಖಾ ತಂಡ ರಚಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.