ಯಾದಗಿರಿಯಲ್ಲಿ ನರೇಂದ್ರಮೋದಿ ಜನ್ಮದಿನ ಹಾಗೂ ಮಾಜಿ ಶಾಸಕ ದಿ.ವೆಂಕಟರಡ್ಡಿ ಮುದ್ನಾಳ್ ಅವರ ಪುಣ್ಯಸ್ಮರಣೆ ನಿಮಿತ್ತ ರಕ್ತದಾನ ಶಿಬಿರ ನಡೆಯಿತು
ಯಾದಗಿರಿ: ನಗರದಲ್ಲಿ ಪ್ರಧಾನಿ ನರೇಂದ್ರಮೋದಿ ಅವರ ಜನ್ಮದಿನ ಹಾಗೂ ಮಾಜಿ ಶಾಸಕ ದಿ.ವೆಂಕಟರಡ್ಡಿ ಮುದ್ನಾಳ್ ಅವರ ಪ್ರಥಮ ಪುಣ್ಯಸ್ಮರಣೆ ಅಂಗವಾಗಿ ರಕ್ತದಾನ ಶಿಬಿರ ನಡೆಯಿತು.
ಬಿಜೆಪಿ ಯುವ ನಾಯಕ ಮಹೇಶರಡ್ಡಿ ಮುದ್ನಾಳ್ ಮಾತನಾಡಿ, ಎಲ್ಲ ದಾನಕ್ಕಿಂತ ರಕ್ತದಾನ ಶ್ರೇಷ್ಠ. ರಕ್ತದಾನದಿಂದ ದೈಹಿಕ ಶಕ್ತಿ ಹೆಚ್ಚಾಗುತ್ತದೆ. ಅಲ್ಲದೆ, ಹೃದಯ ಸಂಬಂಧಿ ಕಾಯಿಲೆ ದೂರವಾಗುತ್ತದೆ ಎಂದರು.
ಶಿಬಿರದಲ್ಲಿ 90ಕ್ಕೂ ಹೆಚ್ಚು ಯುವಕರು ರಕ್ತದಾನ ಮಾಡಿದರು. ನಗರಸಭೆ ಮಾಜಿ ಅಧ್ಯಕ್ಷ ವಿಲಾಸ ಪಾಟೀಲ್, ಗ್ರಾಮೀಣ ಮಂಡಲ ಅಧ್ಯಕ್ಷ ರಾಜಶೇಖರ ಕಾಡಂನೊರ, ಶಂಕರ ಸಾಹ ಕರಣಿಗಿ, ಮಲ್ಲುಸ್ವಾಮಿ ಗುಡಿಮಠ, ಹಣಮರಡ್ಡಿ, ದೇವುಗೌಡ ಪಾಟೀಲ, ಬಸ್ಸುಗೌಡ ನಾಯ್ಕಲ್, ಸುಗು ಚಾಮ, ಗೋವಿಂದಪ್ಪ ಖಾನಾಪುರ, ಚನ್ನವೀರಯ್ಯ ಸ್ವಾಮಿ, ವಿವೇಕಾನಂದರ ಸುಭಾಷ ದೇವದುರ್ಗ, ಮಲ್ಲಿನಾಥ ಸಾಹು ಆಂದೋಲ, ಸಾಬು ಬಗಲಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.