ADVERTISEMENT

39 ಜನರಿಗೆ ಕೋವಿಡ್‌ ದೃಢ

ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 515ಕ್ಕೆ ಏರಿಕೆ

​ಪ್ರಜಾವಾಣಿ ವಾರ್ತೆ
Published 7 ಜೂನ್ 2020, 16:04 IST
Last Updated 7 ಜೂನ್ 2020, 16:04 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಯಾದಗಿರಿ: ಜಿಲ್ಲೆಯಲ್ಲಿ ಭಾನುವಾರ 10 ವರ್ಷದೊಳಗಿನ 5 ಮಕ್ಕಳು ಸೇರಿದಂತೆ ಒಟ್ಟು 39 ಜನರಿಗೆಕೋವಿಡ್‌–19ದೃಢಪಟ್ಟಿದೆ. ಜಿಲ್ಲೆಯಲ್ಲಿ ಖಚಿತಪಟ್ಟ 515 ಪ್ರಕರಣಗಳ ಪೈಕಿ 70 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಒಬ್ಬರು ಮೃತಪಟ್ಟಿದ್ದಾರೆ.

ಯಾದಗಿರಿ ತಾಲ್ಲೂಕಿನ ಹತ್ತಿಕುಣಿ ತಾಂಡಾದ 32 ವರ್ಷದ ಪುರುಷ, 6 ವರ್ಷದ ಬಾಲಕ, 30 ವರ್ಷದ ಮಹಿಳೆ, ವಿಶ್ವಾಸಪುರದ 20 ವರ್ಷದ ಪುರುಷ, ರಾಯನಕಲ್ ತಾಂಡಾದ 3 ವರ್ಷದ ಬಾಲಕಿ, 20 ವರ್ಷದ ಮಹಿಳೆ, 10 ವರ್ಷದ ಬಾಲಕಿ, ಶಹಾಪುರ ತಾಲ್ಲೂಕಿನ ಸಗರದ 20 ವರ್ಷದ ಪುರುಷ, 45 ವರ್ಷದ ಮಹಿಳೆ, ಹುಣಸಗಿ ತಾಲ್ಲೂಕಿನ ನಾರಾಯಣಪುರದ 55 ವರ್ಷದ ಮಹಿಳೆ, ಏವೂರು ಭೀಮಾ ತಾಂಡಾದ 55 ವರ್ಷದ ಪುರುಷ, 55 ವರ್ಷದ ಪುರುಷ, ಗುರುಮಠಕಲ್ ತಾಲ್ಲೂಕಿನ ಬದ್ದೇಪಲ್ಲಿ ತಾಂಡಾದ 19 ವರ್ಷದ ಯುವತಿ ಸೇರಿದಂತೆ 39 ಜನರಿಗೆ ಕೊರೊನಾ ಸೋಂಕು
ದೃಢಪಟ್ಟಿದೆ.

39 ಜನ ಸೋಂಕಿತರಲ್ಲಿ 18 ಮಹಿಳೆಯರು, 21 ಪುರುಷರಿದ್ದಾರೆ. ಸೋಂಕಿತರೆಲ್ಲರೂ ಅಂತರರಾಜ್ಯ ಪ್ರಯಾಣದ ಹಿನ್ನೆಲೆ ಹೊಂದಿದ್ದು, ಪ್ರಕರಣ ಸಂಖ್ಯೆ ಪಿ-5263, ಪಿ-5264ರ ವ್ಯಕ್ತಿಗಳು ಗುಜರಾತ್‍ನ ಅಹ್ಮದಾಬಾದ್‍ನಿಂದ ಮತ್ತು ಉಳಿದ 37 ಜನ ಮಹಾರಾಷ್ಟ್ರದ ಮುಂಬೈಯಿಂದ ಜಿಲ್ಲೆಗೆ ಹಿಂದಿರುಗಿದ್ದಾರೆ.

ADVERTISEMENT

444 ಕೊರೊನಾ ಪ್ರಕರಣ ಸಕ್ರಿಯ: ಭಾನುವಾರ ಪಾಸಿಟಿವ್ ಬಂದ 39 ವರದಿಗಳು ಸೇರಿ ಜೂನ್ 7ರವರೆಗೆ 515 ವರದಿ ಪಾಸಿಟಿವ್ ಬಂದಿವೆ. ಭಾನುವಾರದ 1,689 ನೆಗೆಟಿವ್ ವರದಿ ಸೇರಿ ಈವರೆಗೆ 15,810 ಮಾದರಿಗಳ ವರದಿ ನೆಗೆಟಿವ್ ಬಂದಿವೆ. ಹೊಸದಾಗಿ ಕಳುಹಿಸಲಾದ 33 ಮಾದರಿಗಳು ಸೇರಿದಂತೆ 2,035 ಮಾದರಿಗಳ ವರದಿ ಬರಬೇಕಿದೆ ಎಂದುಹೆಚ್ಚುವರಿಜಿಲ್ಲಾಧಿಕಾರಿ ಪ್ರಕಾಶ್ ಜಿ.ರಜಪೂತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ 444 ಪ್ರಕರಣಗಳು ಸಕ್ರಿಯವಾಗಿವೆ. ಸೋಂಕಿತರೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದ 889 ಜನ ಮತ್ತು ದ್ವಿತೀಯ ಸಂಪರ್ಕದಲ್ಲಿದ್ದ 2,261 ಜನರನ್ನು ಪ್ರತ್ಯೇಕವಾಗಿರಿಸಲಾಗಿದೆ. ಜಿಲ್ಲೆಯಲ್ಲಿ 15 ಕಂಟೇನ್‍ಮೆಂಟ್ ಝೋನ್‍ಗಳನ್ನು ರಚಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.