ADVERTISEMENT

ಭಯ ಬೇಡ; ಮುನ್ನೆಚ್ಚರಿಕೆ ಇರಲಿ

​ಪ್ರಜಾವಾಣಿ ವಾರ್ತೆ
Published 4 ಮೇ 2021, 5:19 IST
Last Updated 4 ಮೇ 2021, 5:19 IST
ಡಾ.ಲಕ್ಷ್ಮಿಕಾಂತ
ಡಾ.ಲಕ್ಷ್ಮಿಕಾಂತ   

ಜನರಿಗೆ ಕೋವಿಡ್‌ ಬಗ್ಗೆ ತಿಳಿವಳಿಕೆ ಇರುವುದದಕ್ಕಿಂತ ತಿಳಿಯದಿರುವುದೇ ಹೆಚ್ಚು. ಹೀಗಾಗಿ ವಿನಾ ಕಾರಣ ಭಯಪಡದೇ ಮತ್ತೊಬ್ಬರನ್ನು ಭಯಪಡಿಸಬಾರದು.

ಕೋವಿಡ್‌ ಎರಡನೇ ಅಲೆಯಲ್ಲಿ ಶೇ 70ರಷ್ಟು ಲಕ್ಷಣಗಳೇ ಕಾಣಿಸುತ್ತಿಲ್ಲ. ಹೀಗಾಗಿ ಯಾವುದು ಕೊರೊನಾ ಲಕ್ಷಣ ಎಂಬುದರ ಬಗ್ಗೆ ತಜ್ಞರಿಂದ ತಿಳಿದುಕೊಳ್ಳಬೇಕು.

ನನಗೂ ಕೋವಿಡ್‌ ದೃಢಪಟ್ಟಿದ್ದು, 12 ದಿನಗಳ ಕಾಲ ಮಾತ್ರೆ ತೆಗೆದುಕೊಂಡಿದ್ದೇನೆ. ಈಗ ಗುಣಮುಖನಾಗಿದ್ದು, ಇನ್ನೆರಡು ದಿನಗಳಲ್ಲಿ ಕರ್ತವ್ಯಕ್ಕೆ ಹಾಜರಾಗುತ್ತಿದ್ದೇನೆ. ಯೋಗ, ವ್ಯಾಯಾಮ ಮಾಡುತ್ತಾ ದಿನಗಳನ್ನು ಕಳೆದಿದ್ದೇನೆ. ಸಿಕ್ಕಿರುವ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು.

ADVERTISEMENT

ಜನತಾ ಕರ್ಫ್ಯೂ ವೇಳೆ ಮನೆಯಿಂದ ಹೊರ ಬರದೇ ಮನೆಯಲ್ಲಿ ಇದ್ದು ಸೋಂಕು ತುಂಡರಿಸಲು ಸಹಕರಿಸಬೇಕು. ಮಧುಮೇಹಿ, ಅಸ್ತಮಾ, ರಕ್ತದೋತ್ತಡ ಇರುವವರು ಜಾಗೃತಿ ವಹಿಸಬೇಕು. ಉಸಿರಾಟ ತೊಂದರೆ ಇದ್ದವರು ಮಾತ್ರ ಆಸ್ಪತ್ರೆಗೆ ತೆರಳಬೇಕು. ಮಾಸ್ಕ್‌ ಧರಿಸಿ, ಅಂತರ ಕಾಪಾಡಿಕೊಳ್ಳಬೇಕು. ಇವುಗಳಿಂದ ನಮ್ಮನ್ನು ನಾವು ಕೋವಿಡ್‌ನಿಂದ ರಕ್ಷಿಸಿಕೊಳ್ಳಲು ಸಾಧ್ಯವಿದೆ.

–ಡಾ.ಲಕ್ಷ್ಮಿಕಾಂತ, ಜಿಲ್ಲಾ ಗುಣಮಟ್ಟ ಖಾತರಿ ಸಲಹೆದಾರ, ಡಿಎಚ್‌ ಕಚೇರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.