ADVERTISEMENT

ಯಾದಗಿರಿ: ಜಾನುವಾರುಗಳ ಮಾಲೀಕರಿಗೆ ಪರಿಹಾರ ವಿತರಣೆ

​ಪ್ರಜಾವಾಣಿ ವಾರ್ತೆ
Published 14 ಮೇ 2025, 15:11 IST
Last Updated 14 ಮೇ 2025, 15:11 IST
ಸಿಡಿಲಿಗೆ ಬಲಿಯಾದ ಜಾನುವಾರುಗಳ ಮಾಲೀಕರಿಗೆ ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಪರಿಹಾರದ ಚೆಕ್‌ ವಿತರಿಸಿದರು 
ಸಿಡಿಲಿಗೆ ಬಲಿಯಾದ ಜಾನುವಾರುಗಳ ಮಾಲೀಕರಿಗೆ ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಪರಿಹಾರದ ಚೆಕ್‌ ವಿತರಿಸಿದರು     

ಯಾದಗಿರಿ: ಸಿಡಿಲಿಗೆ ಬಲಿಯಾದ ಜಾನುವಾರುಗಳ ಮಾಲೀಕರಿಗೆ ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಪರಿಹಾರದ ಚೆಕ್‌ ವಿತರಿಸಿದರು.

ನಗರದ ತಮ್ಮ ಕಚೇರಿಯಲ್ಲಿ ಜಾನುವಾರಗಳ ಮಾಲೀಕರಿಗೆ ಪರಿಹಾರ ವಿತರಿಸಿ ಮಾತನಾಡಿದ ಅವರು, ಪ್ರಕೃತಿ ವಿಕೋಪಗಳಿಂದ ರೈತರಿಗೆ ತೊಂದರೆಯಾಗಿದ್ದು, ಅದನ್ನು ಗಮನಿಸಿದ ಸರ್ಕಾರದಿಂದ ಪರಿಹಾರ ಒದಗಿಸಲಾಗಿದೆ.

ರೈತರು ಪ್ರಕೃತಿ ವಿಕೋಪದಂತಹ ಸಂದರ್ಭದಲ್ಲಿ ಜಾಗೃತಿಯಿಂದರಬೇಕು ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಮಾಧ್ವಾರ ಗ್ರಾಮದ ಶಿವರಾಜ, ಸಾಯಿಬಣ್ಣ, ಬದ್ದೇಪಲ್ಲಿಯ ಉಮ್ಲಾನಾಯಕ, ಈಡ್ಲೂರ ಗ್ರಾಮದ ನರಸಿಂಗಪ್ಪ ಎಂಬ ರೈತರುಗಳಿಗೆ ಪರಿಹಾರ ಚೆಕ್ ವಿತರಿಸಲಾಯಿತು.

ADVERTISEMENT

ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾ ಘಕಟದ ಅಧ್ಯಕ್ಷ ಸುಭಾಷಚಂದ್ರ ಕಟಕಟಿ, ಶಾಂತಗೌಡ ಬಿರಾದಾರ್ ತಹಶೀಲ್ದಾರ್, ಸಾಯಪ್ಪ ಮಾಧ್ವಾರ, ತಾಯಪ್ಪ ಬದ್ದೇಪಲ್ಲಿ, ನರಸಪ್ಪ ಕವಡೆ, ಮಲ್ಲಿಕಾರ್ಜುನ ಅರುಣಿ, ಶ್ರೀಕಾಂತ ಬಡ್ಡೆಪಲ್ಲಿ, ತಮ್ಮಾರೆಡ್ಡಿ ಇಡ್ಲುರ್, ಶರಣರೆಡ್ಡಿ ಯಡಳ್ಳಿ, ಜಗದೀಶ್ ಕಲಾಲ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.