ಯಾದಗಿರಿ: ಸೈದಾಪುರ ಸಮೀಪದ ದುಪ್ಪಲ್ಲಿ ಗ್ರಾಮದ ವ್ಯಾಪ್ತಿಯಲ್ಲಿ ಕಳ್ಳರು ವಿದ್ಯುತ್ ತಂತಿ ಹಾಗೂ ವಿದ್ಯುತ್ ಪರಿವರ್ತಕ (ಟಿ.ಸಿ) ಕದ್ದೊಯ್ದಿದ್ದಾರೆ.
ಜೆಸ್ಕಾಂ ಸೈದಾಪುರ ಶಾಖೆಯ ಶಾಖಾಧಿಕಾರಿ ಮಲ್ಲಪ್ಪ ಅವರು ನೀಡಿದ ದೂರಿನ ಅನ್ವಯ ಸೈದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದುಪ್ಪಲ್ಲಿ ಗ್ರಾಮದ ಮಹಿಪಾಲರೆಡ್ಡಿ ಗೌಡ ದುಪ್ಪಲ್ಲಿ ಅವರ ಜಮೀನಿನ ಪಂಪ್‌ಸೆಟ್‌ಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಈ ಮಾರ್ಗದ 12 ಕಂಬಗಳಿಗೆ ಇದ್ದ ₹ 80 ಸಾವಿರ ಮೌಲ್ಯದ 2 ಎಸಿಎಸ್‌ಆರ್ ಎಲ್.ಟಿ ತಂತಿ ಹಾಗೂ ₹ 30 ಸಾವಿರ ಮೌಲ್ಯದ 25 ಕೆ.ವಿ ಸಾಮರ್ಥ್ಯದ ಟಿ.ಸಿ ಕಳ್ಳತನವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಚಿನ್ನಾಭರಣ ಕಳವು
ಯಾದಗಿರಿ ತಾಲ್ಲೂಕಿನ ಮೋಟ್ನಳ್ಳಿ ಗ್ರಾಮದ ನಿವಾಸಿಯೊಬ್ಬರ ಮನೆ ಬಾಗಿಲಿನ ಕೀಲಿಯ ಕೊಂಡಿ ಮುರಿದ ಕಳ್ಳರು ನಗದು ಮತ್ತು ಚಿನ್ನಾಭರಣವನ್ನು ಕದ್ದೊಯ್ದಿದ್ದಾರೆ.
ಸಾಬಮ್ಮ ಅವರ ಮನೆಯಲ್ಲಿ ಕಳ್ಳತನವಾಗಿದೆ. ಸಾಬಮ್ಮ ಅವರ ಸಂಬಂಧಿಕರೊಬ್ಬರು ಮೃತಪಟ್ಟಿದ್ದರು. ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಕುಟುಂಬ ಸದಸ್ಯರು ಮನೆಗೆ ಬೀಗ ಹಾಕಿ ತೆರಳಿದ್ದರು. ವಾಪಸ್ ಬಂದು ನೋಡಿದ್ದಾಗ ಬಾಗಿಲಿನ ಕೀಲಿಯ ಕೊಂಡಿ ಮುರಿದಿತ್ತು. ಅಲ್ಮೇರಾದಲ್ಲಿ ಇರಿಸಿದ್ದ ₹ 25 ಸಾವಿರ ನಗದು ಸೇರಿ ₹ 1.41 ಲಕ್ಷ ಮೌಲ್ಯದ ಚಿನ್ನಾಭರಣವನ್ನು ದುಷ್ಕರ್ಮಿಗಳು ಕಳವು ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಗುರುಮಠಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.