ADVERTISEMENT

ಶಹಾಪುರ: ನಕಲಿ ಜಾತಿ ಪ್ರಮಾಣಪತ್ರ ವಿತರಣೆ ತಡೆಯಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 21 ಮೇ 2022, 4:30 IST
Last Updated 21 ಮೇ 2022, 4:30 IST
ಶಹಾಪುರ ನಗರದ ಬಸವೇಶ್ವರ ವೃತ್ತದಲ್ಲಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಶುಕ್ರವಾರ ಮೀಸಲಾತಿ ಹೆಚ್ಚಳಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಯಿತು
ಶಹಾಪುರ ನಗರದ ಬಸವೇಶ್ವರ ವೃತ್ತದಲ್ಲಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಶುಕ್ರವಾರ ಮೀಸಲಾತಿ ಹೆಚ್ಚಳಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಯಿತು   

ಶಹಾಪುರ: ಮೀಸಲಾತಿಯನ್ನು ಹೆಚ್ಚಳ ಮಾಡುವಂತೆ ಆಗ್ರಹಿಸಿ ಶುಕ್ರವಾರ ರಾಜ್ಯ ಸ್ವಾಭಿಮಾನಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಮೀಸಲಾತಿ ಹೆಚ್ಚಳ ಹೋರಾಟ ಸಮಿತಿಯ ಆಶ್ರಯದಲ್ಲಿ ಪ್ರತಿಭಟನೆ ನಡೆಯಿತು.

ರಾಜ್ಯದಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡದ ಹೆಸರಿನಲ್ಲಿ ನಕಲಿ ಜಾತಿ ಪ್ರಮಾಣ ಪತ್ರ ಪಡೆಯುತ್ತಿರುವ ಹಾಗೂ ವಿತರಿಸುವ ಅಧಿಕಾರಿಗಳ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಬೇಕು. ನಾಗಮೋಹನದಾಸ ಆಯೋಗದ ವರದಿ ಜಾರಿ ಮಾಡಬೇಕು. ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಡಿಜಿಪಿ ರವೀಂದ್ರನಾಥ ರಾಜೀನಾಮೆಯನ್ನು ಹಿಂಪಡೆಯಬೇಕು. ಎನ್‌ಸಿಪಿ ಹಾಗೂ ಟಿಎಸ್‌ಪಿ ಕಾಯ್ದೆಯ ಕಲಂ 7 ಡಿ ರದ್ದುಗೊಳಿಸಬೇಕು. ಪರಿಶಿಷ್ಟ ಪಂಗಡದ ಕಲ್ಯಾಣ ಇಲಾಖೆಗೆ ಕೂಡಲೇ ಆಯುಕ್ತರನ್ನು ನೇಮಿಸಬೇಕು ಎಂದು ಪ್ರತಿಭಟನೆಯಲ್ಲಿ ಭಾಗವಹಿಸಿದ ಮುಖಂಡರು ಆಗ್ರಹಿಸಿದರು.

ಗೊಲಪಲ್ಲಿ ವಾಲ್ಮೀಕಿ ಗುರುಪೀಠದ ವರದಾನಂದೇಶ್ವರ ಸ್ವಾಮೀಜಿ, ಹೋರಾಟ ಸಮಿತಿಯ ಅಧ್ಯಕ್ಷ ಮರೆಪ್ಪ ಪ್ಯಾಟಿ ಶಿರವಾಳ, ಹಣಮಂತರಾಯ ದೊರೆ ದಳಪತಿ, ರಾಜಾ ಮಲ್ಲಪ್ಪ ನಾಯಕ ವನದುರ್ಗ, ಹನುಮೇಗೌಡ ಮರಕಲ್, ಆರ್.ಚೆನ್ನಬಸ್ಸು ವನದುರ್ಗ ಗೌಡಪ್ಪಗೌಡ ಆಲ್ದಾಳ, ನೀಲಕಂಠ ಬಡಿಗೇರ, ಚೆನ್ನಪ್ಪ ಆನೇಗುಂದಿ, ರಾಮಚಂದ್ರ ಕಾಶಿರಾಜ, ಮಲ್ಲಿಕಾರ್ಜುನ ಪೂಜಾರಿ, ನಾಗಪ್ಪ ಕಾಶಿರಾಜ, ಮಾನಸಿಂಗ್ ಚವ್ಹಾಣ, ಶೇಖರ ದೊರೆ ಕಕ್ಕಸಗೇರಾ, ನಾಗಣ್ಣ ಬಡಿಗೇರ, ಶಿವಪುತ್ರಪ್ಪ ಜವಳಿ, ಶಿವಕುಮಾರ ತಳವಾರ, ಶರಣು ದೋರನಹಳ್ಳಿ, ಸತ್ಯನಾರಾಯಣ ಅನವಾರ, ರವೀಂದ್ರ ಯಕ್ಷಿಂತಿ, ತಿರುಪುತಿ ಯಕ್ಷಿಂತಿ, ವಾಸುದೇವ ಕಟ್ಟಿಮನಿ, ಚಂದ್ರಶೇಖರ ಜಾದವ,ಬಸವರಾಜ ಮುಡಬೂಳ, ಶೇಖಪ್ಪ ಯಕ್ಷಿಂತಿ, ಮಹಾದೇವ ಶಾರದಹಳ್ಳಿ, ಮಹಾದೇವ ದಿಗ್ಗಿ, ಹಣಮಮಂತರಾಯ ಟೋಕಾಪುರ, ನಿಜಗುಣ ದೋರನಹಳ್ಳಿ, ಯಲ್ಲಪ್ಪ ದೊಡ್ಮನಿ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.