
ಯರಗೋಳ: ಮಾನವನ ಪಂಚೇಂದ್ರಿಯಗಳಲ್ಲಿ ಕಣ್ಣು ಬಹುಮುಖ್ಯವಾದ ಅಂಗ. ಇದನ್ನು ಅತ್ಯಂತ ಕಾಳಜಿಯಿಂದ ಆರೈಕೆ ಮಾಡಿಕೊಂಡಾಗ ಮಾತ್ರ ನಿಸರ್ಗದ ಸೌಂದರ್ಯ ಸವಿಯಲು ಸಾಧ್ಯ ಎಂದು ನೇತ್ರಾಧಿಕಾರಿ ಉಮೇಶ ಹೇಳಿದರು.
ಕಲಿಕೆ ಟಾಟಾ ಟ್ರಸ್ಟ್ ಸಂಸ್ಥೆಯು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಶುಕ್ರವಾರ ಗ್ರಾಮ ಹಿರಿಯರ ಕೇಂದ್ರದಲ್ಲಿ ಹಿರಿಯರಿಗೆ ಏರ್ಪಡಿಸಿದ ಆರೋಗ್ಯ ತಪಾಸಣಾ ಶಿಬಿರದಲ್ಲಿ ಅವರು ಮಾತನಾಡಿದರು.
ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಲಹೆಗಾರ ವಿಜಯಕುಮಾರ ಮಾತನಾಡಿ, ತಂಬಾಕು, ಜರ್ದಾ, ಮದ್ಯಪಾನ ಸೇವನೆಯಿಂದ ಆಗುವ ದುಷ್ಪರಿಣಾಮ ಕುರಿತು ಉಪನ್ಯಾಸ ನೀಡಿದರು.
ಕಲಿಕೆ ಸಂಸ್ಥೆಯ ಹಿರಿಯ ಕಾರ್ಯಕ್ರಮ ಸಂಯೋಜಕ ಮರೆಪ್ಪ ನಂದಿಹಳ್ಳಿ ಮಾತನಾಡಿದರು.
ಶಿಬಿರದಲ್ಲಿ 40ಕ್ಕು ಹೆಚ್ಚು ಹಿರಿಯ ನಾಗರಿಕರಿಗೆ ಉಚಿತವಾಗಿ ಕಣ್ಣಿನ ತಪಾಸಣೆ ಮಾಡಿಸಲಾಯಿತು. 26 ಜನ ಹಿರಿಯ ನಾಗರಿಕರಿಗೆ ಉಚಿತ ಕನ್ನಡಕ ವಿತರಿಸಲಾಯಿತು. ಶಸ್ತ್ರ ಚಿಕಿತ್ಸೆಗೆ ಅರ್ಹ ಇರುವ ಕೆಲವು ಹಿರಿಯರಿಗೆ ಜಿಲ್ಲಾ ಆಸ್ಪತ್ರೆಗೆ ಹೋಗಲು ಸಲಹೆ ನೀಡಲಾಯಿತು.
ಗ್ರಾ.ಪಂ ಕರವಸುಲಿಗಾರ ಮಲ್ಲಿಕಾರ್ಜುನ, ತಂಬಾಕು ನಿಯಂತ್ರಣ ಕೋಶದ ಸಲಹೆಗಾರ ವಿಜಯಕುಮಾರ, ನೇತ್ರಾಧಿಕಾರಿ ಉಮೇಶ, ಕಲಿಕೆ ಸಂಸ್ಥೆಯ ಪ್ರೇರಕ ಜಗದೇವಪ್ಪ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.