ADVERTISEMENT

ಯಾದಗಿರಿ: ಶಾಂತಿಯುತ ಗ್ರಾಮ ಪಂಚಾಯಿತಿ ಮತದಾನ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2020, 4:11 IST
Last Updated 22 ಡಿಸೆಂಬರ್ 2020, 4:11 IST
ಸುರಪುರ ತಾಲ್ಲೂಕಿನ ಕೆಂಭಾವಿ ಸಮೀಪದ ನಗನೂರ ಗ್ರಾಮದಲ್ಲಿ ಶಾಂತಿಯುತ ಮತದಾನದ ನಡೆದಿದೆ
ಸುರಪುರ ತಾಲ್ಲೂಕಿನ ಕೆಂಭಾವಿ ಸಮೀಪದ ನಗನೂರ ಗ್ರಾಮದಲ್ಲಿ ಶಾಂತಿಯುತ ಮತದಾನದ ನಡೆದಿದೆ   

ಯಾದಗಿರಿ: ಜಿಲ್ಲೆಯ ಶಹಾಪುರ, ಸುರಪುರ, ಹುಣಸಗಿ ತಾಲ್ಲೂಕಿನಲ್ಲಿ ಮೊದಲ ಹಂತದ ಗ್ರಾಮ ಪಂಚಾಯಿತಿ ಮತದಾನ ಆರಂಭವಾಗಿದ್ದು, ಶಾಂತಿಯುತವಾಗಿದೆ.

ಶಹಾಪುರ ತಾಲ್ಲೂಕಿನ 22, ಸುರಪುರ ತಾಲ್ಲೂಕಿನ 20, ಹುಣಸಗಿ ತಾಲ್ಲೂಕಿನ 17 ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಯಲಿದೆ.

ಅಂತರ ಕಾಪಾಡಿಕೊಳ್ಳಲು ಗುರುತು: ಮತದಾನ‌ ನಡೆಯುವ ಮತಗಟ್ಟೆಗಳಲ್ಲಿ ಅಂತರ ಕಾಪಾಡಿಕೊಳ್ಳಲು ಗುರುತು ಹಾಕಲಾಗಿದೆ.

ADVERTISEMENT

ಶಹಾಪುರ ತಾಲ್ಲೂಕಿನಲ್ಲಿ 180 ಮತಗಟ್ಟೆಯಲ್ಲಿ ಶಾಂತಿಯುತ ಮತದಾನ ನಡೆದಿದೆ. ಮಾಸ್ಕ್ ಧರಿಸಿಕೊಂಡು ಮತದಾರರು ಆಗಮಿಸುತ್ತಿದ್ದಾರೆ. ಸುರಕ್ಷಿತ ಅಂತರ ಕಾಣಿಸಲಿಲ್ಲ. ಕಡ್ಡಾಯವಾಗಿ ಜ್ವರ ತಪಾಸಣೆ ಮಾಡಲಾಗುತ್ತಿದೆ.ಮತಗಟ್ಟೆಗೆ ಮಹಿಳೆಯರು ಹೆಚ್ಚಾಗಿ ಆಗಮಿಸುತ್ತಿದ್ದಾರೆ.

ಸುರಪುರ ತಾಲ್ಲೂಕಿನ ಕೆಂಭಾವಿ ಸಮೀಪದ ನಗನೂರ ಗ್ರಾಮದಲ್ಲಿ ಶಾಂತಿಯುತ ಮತದಾನದ ನಡೆದಿದೆ. ಅಂತರ ಕಾಪಾಡಿಕೊಂಡು ಜನ ಮತದಾನ ಮಾಡುತ್ತಿದ್ದಾರೆ. ಕಡ್ಡಾಯವಾಗಿ ಜ್ವರ ತಪಾಸಣೆ ಮಾಡಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.