ಹುಣಸಗಿ: ‘ಕಳೆದ ನಾಲ್ಕು ದಶಕಗಳ ಹಿಂದೆ ತಾವು ಕಲಿತ ಶಾಲೆ ಹಾಗೂ ಗುರುಗಳನ್ನು ಸ್ಮರಿಸಿಕೊಂಡು ಅವರನ್ನು ಮತ್ತೆ ಕರೆಸಿ ಎಲ್ಲರೂ ಒಂದಾಗಿ ನೋಡುವಂತೆ ಮಾಡಿದ ಕಾರ್ಯ ಅವಿಸ್ಮರಣಿಯ’ ಎಂದು ನಿವೃತ್ತ ಶಿಕ್ಷಕ ಎಂ.ಎನ್ ನಾಗೇಂದ್ರಪ್ಪ ಹೇಳಿದರು.
ಹುಣಸಗಿ ಪಟ್ಟಣದ ಮಾತೋಶ್ರೀ ಸುಬ್ಬಮ್ಮಗೌಡತಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಗುರುವಂದನಾ ಹಾಗೂ ಸ್ನೇಹ ಸಮ್ಮೀಲನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ತಾವು ಕಲಿಯುವಾಗ ಚಿಕ್ಕ ಮಕ್ಕಳು, ಈಗ ಒಬ್ಬೊಬ್ಬರು ಒಂದೊಂದು ಮಹತ್ವದ ಸ್ಥಾನದಲ್ಲಿದ್ದಿರಿ. ಈ ಕ್ಷಣ ಅತ್ಯಂತ ಹೆಮ್ಮೆಯಿಂದ ಕೂಡಿದೆ ಎಂದರು.
ನಿವೃತ್ತ ಶಿಕ್ಷಕಿ ಚಿತ್ರಲೇಖಾ ಟೆಂಗಳೇಕರ್ ಹಾಗೂ ಕ್ಷಾಮಾ ರಾಯಚೂರು ಮಾತನಾಡಿ, ಜೀವನದ ಸಂಧ್ಯಾ ಕಾಲದಲ್ಲಿರುವ ನಮಗೆ ಇಂತಹ ಕಾರ್ಯಕ್ರಮಗಳು ಅತ್ಯಂತ ಸಂತೃಪ್ತಿ ತಂದುಕೊಡುತ್ತವೆ ಎಂದರು.
ಈ ಸಂದರ್ಭದಲ್ಲಿ ಸುಲೋಚನಾ ಬಾಸುತ್ಕರ್, ಸಂಗನಗೌಡ ಪಾಟೀಲ, ಡಿ.ಎಂ ಮಗದೂಮ್, ಶಂಕರಗೌಡ ಪಾಟೀಲ ಸೇರಿದಂತೆ 8 ಜನ ಶಿಕ್ಷಕರನ್ನು ಸನ್ಮಾನಿಸಿ ಗುರುಕಾಣಿಕೆ ನೀಡಿ ಗೌರವಿಸಲಾಯಿತು.
ಸುಮಾರು 50 ಕ್ಕೂ ಹೆಚ್ಚು ಹಳೆ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಅಗಲಿದ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಸುಶೀಲಾ ಕುಲಕರ್ಣಿ, ಜಮೀರ್ ಅಹಮ್ಮದ, ಶರಣಯ್ಯ ಹಿರೇಮಠ, ವ್ಯಾಸರಾಜ ಜಮದರಖಾನ್, ಸುರೇಶ ಕಕ್ಕಳಮೇಲಿ, ರೇಖಾ ಬಳಿ, ಪಾರ್ವತಿ ಮೇಲಿನಮನಿ, ಶಿವಕುಮಾರ ಬಂಡೋಳಿ, ಅಮರೇಶ ಸಜ್ಜನ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.