ADVERTISEMENT

ಶಹಾಪುರ: ಕನ್ಯಾಕೊಳ್ಳೂರ 68.5 ಮಿ.ಮೀ ಮಳೆ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2025, 6:10 IST
Last Updated 19 ಸೆಪ್ಟೆಂಬರ್ 2025, 6:10 IST
ಶಹಾಪುರ ನ್ಯಾಯಾಲಯದ ಆವರಣದಲ್ಲಿ ಗುರುವಾರ ಸುರಿದ ಮಳೆಗೆ ನೀರು ಸಂಗ್ರಹವಾಗಿದೆ
ಶಹಾಪುರ ನ್ಯಾಯಾಲಯದ ಆವರಣದಲ್ಲಿ ಗುರುವಾರ ಸುರಿದ ಮಳೆಗೆ ನೀರು ಸಂಗ್ರಹವಾಗಿದೆ   

ಶಹಾಪುರ: ತಾಲ್ಲೂಕಿನ ಕನ್ಯಾಕೊಳ್ಳುರ ಗ್ರಾಮದ ವ್ಯಾಪ್ತಿಯಲ್ಲಿ ಗುರುವಾರ 68.8 ಮಿ.ಮೀ ಮಳೆಯಾಗಿದೆ. ತಗ್ಗು ಪ್ರದೇಶದ ಜಮೀನುಗಳಿಗೆ ನೀರು ನುಗ್ಗಿವೆ ಎಂದು ಸಹಾಯಕ ಕೃಷಿ ನಿರ್ದೇಶಕ ಸುನಿಲಕುಮಾರ ಯರಗೊಳ ತಿಳಿಸಿದರು.

ತಾಲ್ಲೂಕಿನ ತಿಪ್ಪನಹಳ್ಳಿ ಗ್ರಾಮದ ಬಳಿ ಗದಗ-ವಾಡಿ ರೈಲ್ವೆ ಸೇತುವೆ ಕಾಮಗಾರಿ ನಡೆದಿದೆ. ಮಳೆ ನೀರು ಹೋಗಲು ಸರಿಯಾದ ರಸ್ತೆ ವ್ಯವಸ್ಥೆ ಮಾಡದ ಕಾರಣ ಸುಮಾರು 7 ಎಕರೆಯಲ್ಲಿ ಬೆಳೆದು ನಿಂತ ಹತ್ತಿ, ಮೆಣಸಿನಕಾಯಿ ಬೆಳೆ ನೀರು ಪಾಲಾಗಿವೆ ಎನ್ನುತ್ತಾರೆ ಭೀಮರಾಯ ತಿಪ್ಪನಹಳ್ಳಿ.

ತಾಲ್ಲೂಕಿನಲ್ಲಿ ಮತ್ತೆ ಎರಡು ದಿನದಲ್ಲಿ ಹೆಚ್ಚಿನ ಮಳೆಯಾಗಿದೆ. 10 ಮನೆ ಕುಸಿದಿವೆ ಯಾವುದೇ ಹಾನಿಯಾದ ಬಗ್ಗೆ ವರದಿಯಾಗಿಲ್ಲ. ಮಳೆಯಾಗುತ್ತಿರುವುದರಿಂದ ಸದ್ಯಕ್ಕೆ ಸರ್ವೆ ಕಾರ್ಯ ನಿಲ್ಲಿಸಿದ್ದೇವೆ ಎಂದು ತಹಶೀಲ್ದಾರ್ ಸಿದ್ದರೂಢ ಬನ್ನಿಕೊಪ್ಪ ಮಾಹಿತಿ ನೀಡಿದರು.

ADVERTISEMENT

ಹತ್ತಿ ಮತ್ತು ಮೆಣಸಿನಕಾಯಿ ಬೆಳೆದ ನಮ್ಮ ಪಾಡು ಹೇಳ ತೀರದು. ವಾತಾವರಣದಲ್ಲಿ ಏರುಪೇರು ಹಾಗೂ ಅಕಾಲಿಕವಾಗಿ ಸುರಿಯುತ್ತಿರುವ ಮಳೆಯಿಂದ ಬೆಳೆ ಸಂಪೂರ್ಣವಾಗಿ ಹಾನಿಯಾಗಿವೆ. ಮುಂದೇನು ಎಂಬ ಆತಂಕ ಶುರುವಾಗಿದೆ ಎನ್ನುತ್ತಾರೆ ರೈತರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.