ADVERTISEMENT

ಗುರುಮಠಕಲ್‌: ಚಿರತೆ ಕುರಿತು ಜಾಗೃತಿ, ಭಿತ್ತಿ ಪತ್ರ ಹಂಚಿಕೆ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2025, 6:16 IST
Last Updated 19 ಸೆಪ್ಟೆಂಬರ್ 2025, 6:16 IST
ಗುರುಮಠಕಲ್‌ ಹತ್ತಿರದ ಎಂ.ಟಿ.ಪಲ್ಲಿ ಗ್ರಾಮದಲ್ಲಿ ಬುಧವಾರ ರಾತ್ರಿ ಭಿತ್ತಿ ಪತ್ರ ಹಂಚಿ ಜಾಗೃತಿ ಮೂಡಿಸಿದ ಎ.ಆರ್.ಎಫ್‌.ಒ. ಸಂಗಮೇಶ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ.
ಗುರುಮಠಕಲ್‌ ಹತ್ತಿರದ ಎಂ.ಟಿ.ಪಲ್ಲಿ ಗ್ರಾಮದಲ್ಲಿ ಬುಧವಾರ ರಾತ್ರಿ ಭಿತ್ತಿ ಪತ್ರ ಹಂಚಿ ಜಾಗೃತಿ ಮೂಡಿಸಿದ ಎ.ಆರ್.ಎಫ್‌.ಒ. ಸಂಗಮೇಶ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ.   

ಗುರುಮಠಕಲ್‌: ಹತ್ತಿರದ ಎಂ.ಟಿ. ಪಲ್ಲಿ ಗ್ರಾಮದಲ್ಲಿ ಇತ್ತೀಚೆಗೆ ಚಿರತೆಗಳ ಚಲನವಲನ ಹೆಚ್ಚಾಗಿ ಕಂಡುಬಂದ ಹಿನ್ನಲೆ ಬುಧವಾರ (ಸೆ.17) ರಾತ್ರಿ ಮತ್ತು ಗುರುವಾರ (ಸೆ.18) ಬೆಳಿಗ್ಗೆ ಅರಣ್ಯ ಇಲಾಖೆಯಿಂದ ಭಿತ್ತಿ ಪತ್ರಗಳನ್ನು ಹಂಚಿಕೆ ಮಾಡಲಾಯಿತು.

ಚಿರತೆ ಕಂಡಂತ ಸಮಯದಲ್ಲಿ ‘ಜನರು ಸುರಕ್ಷತೆಗೆ ಅನುಸರಿಸಬೇಕಾದ ಮತ್ತು ಮಾಡಬಾರದ ಕ್ರಮಗಳ ಕುರಿತು ಜಾಗೃತಿ ಮೂಡಿಸುವ ಭಿತ್ತಿ ಪತ್ರಗಳನ್ನು ಹಂಚಿಕೆ ಮಾಡಲಾಗುತ್ತಿದೆ’ ಎಂದು ಉಪವಲಯ ಅರಣ್ಯಾಧಿಕಾರಿ ಸಂಗಮೇಶ ಮಾಹಿತಿ ನೀಡಿದರು.

ರೈತರು ಜಮೀನಿಗೆ ತೆರಳುವಾಗಿ ಗುಂಪಾಗಿ ಮತ್ತು ಕೈಯಲ್ಲಿ ಕೋಲು, ಬಡಿಗೆಗಳನ್ನು ಹಿಡಿದುಕೊಂಡಿರಿ. ಬಯಲು ಮತ್ತು ಸುರಕ್ಷಿತ ಪ್ರದೇಶದಲ್ಲಿ ನಿಲ್ಲಬೇಕು, ಸುಳ್ಳು ಸುದ್ದಿಗಳು ಹರಡದಂತೆ ಎಚ್ಚರವಹಿಸಬೇಕು. ಸಹಾಯವಾಣಿ (ಮೊ.9481993303)ಗೆ ಕರೆ ಅಥವಾ ವಾಟ್ಸ್‌ಆ್ಯಪ್‌ ಮೂಲಕ ಮಾಹಿತಿ ಹಂಚಿಕೊಂಡು ಸಹಕರಿಸುವಂತೆ' ಕೋರಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.