ಕಕ್ಕೇರಾ: ‘12ನೇ ಶತಮಾನದ ಬಸವಾದಿ ಶರಣರಲ್ಲಿ ಮಡಿವಾಳ ಮಾಚಿದೇವರು ತಮ್ಮ ಕಾಯಕದ ಜತೆಗೆ ವಚನಗಳ ರಕ್ಷಿಸುವ ಮೂಲಕ ಸಮಾಜದ ಅಂಕುಡೊಂಕು ಸರಿಪಡಿಸಿದ ಶರಣ’ ಎಂದು ಹಿರಿಯ ಮುಖಂಡ ದೇವಿಂದ್ರಪ್ಪ ಬಳಿಚಕ್ರ ಹೇಳಿದರು.
ಪಟ್ಟಣದ ಮಡಿವಾಳ ವೃತ್ತದಲ್ಲಿ ನಡೆದ ಮಹಾಶಿವಶರಣ ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ‘ಬಸವಾದಿ ಶರಣದಲ್ಲಿ ಮಡಿವಾಳ ಮಾಚಿದೇವರು ಬಾಲ್ಯದಿಂದಲೂ ಕಾಯಕ ನಿಷ್ಠನಾಗಿದ್ದರು. ಪರಿಶುದ್ಧವಾದ ಮನಸ್ಸಿನಿಂದ ಬಟ್ಟೆ ಸೆಳೆಯುವ ತನ್ನ ಕಾಯಕತ್ವದೊಂದಿಗೆ ತಾಳೆ ಎಲೆಗಳ ಮೇಲೆ 346ಕ್ಕೂ ಹೆಚ್ಚು ಅಪಾರ ವಚನಗಳನ್ನು ಬರೆದಂತಹ ಮಹಾ ಶರಣ. ವಚನಗಳ ರಕ್ಷಕರಾರಾಗಿ ಕೈಯಲ್ಲಿ ಖಡ್ಗ ಹಿಡಿದು ಮೌಡ್ಯದ, ಅನಾಚಾರ ಹಾಗೂ ಕೆಟ್ಟ ಸಂಪ್ರದಾಯಗಳ ವಿರುದ್ಧ ಹೋರಾಡಿದ ಶರಣರು’ ಎಂದು ಗುಣಗಾನ ಮಾಡಿದರು.
ಪುರಸಭೆ ಅಧ್ಯಕ್ಷ ಸಣ್ಣಅಯ್ಯಾಳಪ್ಪ ಬಡಿಗೇರ ಅವರು, ಮಡಿವಾಳ ಮಾಚಿದೇವರ ದ್ವಜಾರೋಹಣ ನೆರವೇರಿಸಿದರು. ಸಂಗಯ್ಯ ಸ್ವಾಮಿ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿದರು.
ಶಿಶುನಾಳ ಶರೀಫ ಮುತ್ಯಾ, ನಿಂಗಯ್ಯಗೌಡ ಬೂದಗುಂಪಿ, ರಮೇಶಶೆಟ್ಟಿ, ಶರಣು ಸೋಲಾಪುರ, ನಾಗರಾಜ ಮಡಿವಾಳ, ಪರಮಾನಂದ ಮಡಿವಾಳ, ಚಂದ್ರು ಸಕ್ರಿ, ಗವಿಸಿದ್ದೇಶ ಹೊಗರಿ, ಚಂದ್ರು ವಜ್ಜಲ, ಸೋಮು ದೊರೆ, ಯಂಕಣ್ಣ ಮಡಿವಾಳ, ಶಿವಣ್ಣ ಮಡಿವಾಳ, ಈರಪ್ಪ ಮಡಿವಾಳ, ಪರಶುರಾಮ ಗೋವಿಂದರ, ಸದ್ದಾಂ ಹುಸೇನ್, ಅಮರೇಶ ದೊರೆ, ಪರಮಣ್ಣ ಹಡಪದ, ಗೈಯ್ಯಪ್ಪ ಚನ್ನಪಟ್ಟಣ, ರಮೇಶ ಮಡಿವಾಳ, ಸಂಗಣ್ಣ ಕುರಿ, ಶರಣು ಮಡಿವಾಳ ಸೇರಿದಂತೆ ಹಲವರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.