ಯರಗೋಳ: ಸಮೀಪದ ಅಲ್ಲಿಪುರ ಗ್ರಾಮದಲ್ಲಿ ಶುಕ್ರವಾರ ರಾತ್ರಿ ನಾಪತ್ತೆಯಾಗಿದ್ದ ಬಾಲಕನ ಶವ ಶನಿವಾರ ಗ್ರಾಮದ ಚರ್ಚ್ ಬಳಿ ಪತ್ತೆಯಾಗಿದೆ.
ದೇವಪ್ಪ (15) ಎಂಬಾತ ಬಾಲಕನ ಮುಖದ ಮೇಲೆ ದುಷ್ಕರ್ಮಿಗಳು ಕಲ್ಲು ಎತ್ತಿಹಾಕಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕುರಿ ಕಾಯುತ್ತಿದ್ದ ದೇವಪ್ಪ ಶುಕ್ರವಾರ ಸಂಜೆ ಜಮೀನಿಗೆ ಹೋಗಿ ವಾಪಸ್ ಬಂದಿದ್ದ. ಸಂಜೆ 7 ಗಂಟೆ ನಂತರ ಏಕಾಏಕಿ ನಾಪತ್ತೆಯಾಗಿದ್ದ. ತಂದೆ ರಾಜೀವಪ್ಪ ಹಾಗು ಕುಟುಂಬದ ಸದಸ್ಯರು ಸಾಕಷ್ಟು ಹುಡುಕಾಟ ನಡೆಸಿದ್ದರು. ಆದರೆ, ದೇವಪ್ಪ ಪತ್ತೆಯಾಗಿರಲಿಲ್ಲ. ಶನಿವಾರ ಗ್ರಾಮದ ಚರ್ಚ್ ಹಿಂದುಗಡೆ ಬಾಲಕನ ಶವ ಪತ್ತೆಯಾಗಿದೆ. ಹಳೆ ವೈಷಮ್ಯದ ಹಿನ್ನೆಲೆ ಕೊಲೆ ನಡೆದಿದೆ ಎಂದು ಪೋಷಕರು ಆರೋಪಿಸಿದ್ದಾರೆ.
ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.