ADVERTISEMENT

ಭರವಸೆಯಂತೆ ಪ್ರತ್ಯೇಕ ಸಚಿವಾಲಯ ಸ್ಥಾಪಿಸಿ: ಕಂದಕೂರ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2025, 5:44 IST
Last Updated 20 ಡಿಸೆಂಬರ್ 2025, 5:44 IST
ಶರಣಗೌಡ ಕಂದಕೂರ
ಶರಣಗೌಡ ಕಂದಕೂರ   

ಗುರುಮಠಕಲ್‌: ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗಾಗಿ, ಕೊಟ್ಟ ಭರವಸೆಯಂತೆ ಕೂಡಲೇ ಕಲ್ಯಾಣ ಕರ್ನಾಟಕ ಪ್ರತ್ಯೇಕ ಸಚಿವಾಲಯ ಸ್ಥಾಪಿಸುವಂತೆ ಶಾಸಕ ಶರಣಗೌಡ ಕಂದಕೂರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಗ್ರಹಿಸಿದ್ದರು.

‘ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಅವರು 2024ರ ಸೆ.17 ರಂದು ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ನೀಡಿದ್ದ ಪ್ರತ್ಯೇಕ ಸಚಿವಾಲಯದ ಭರವಸೆ ಇಂದಿಗೂ ಈಡೆರಿಸಿಲ್ಲ’ ಎಂದರು.

‘ಕೆಕೆಆರ್‌ಡಿಬಿ ಯಲ್ಲಿ 224 ಇಂಜಿನಿಯರಗಳ ಅವಶ್ಯಕತೆ ಇದೆ.‌ ಆದರೆ, ಕೇವಲ 22 ಎಂಜಿನಿಯರ್‌ಗಳಷ್ಟೇ ಇದ್ದುದರಿಂದ ಅಭಿವೃದ್ಧಿಗೆ ಹಿನ್ನೆಡೆಯಾಗುತ್ತಿದೆ. ಕಾರಣ ಕೂಡಲೇ ಸಚಿವಾಲಯ ಸ್ಥಾಪನೆ ಮಾಡಬೇಕು’ ಎಂದು ಒತ್ತಾಯಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.