ADVERTISEMENT

ಶಹಾಪುರ: ಸಾಹಿತ್ಯ ಸಮ್ಮೇಳನ ನಡೆಸಲು ವಿಘ್ನ

ಮಾಯಾ ಜಿಂಕೆಯಾದ 5ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ

ಟಿ.ನಾಗೇಂದ್ರ
Published 13 ಅಕ್ಟೋಬರ್ 2025, 6:37 IST
Last Updated 13 ಅಕ್ಟೋಬರ್ 2025, 6:37 IST
ಶಹಾಪುರ ನಗರದ ಕಸಾಪ ಕಾರ್ಯಾಲಯ
ಶಹಾಪುರ ನಗರದ ಕಸಾಪ ಕಾರ್ಯಾಲಯ   

ಶಹಾಪುರ: ಯಾದಗಿರಿ 5ನೇ ಜಿಲ್ಲಾ ಸಾಹಿತ್ಯ ಸಮ್ಮೇಳನವನ್ನು ಶಹಾಪುರದಲ್ಲಿ ನಡೆಸಲು ಹಲವಾರು ವಿಘ್ನ ಎದುರುಗೊಂಡಿವೆ.

ಪ್ರಸಕ್ತ ವರ್ಷದ ಆರಂಭದಲ್ಲಿ ಸಮ್ಮೇಳನ ನಡೆಸಲು ಸಿದ್ಧತೆ ನಡೆಸಲಾಗಿತ್ತು. ಆದರೆ ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ನಡುವೆ ಉಂಟಾಗ ಗೊಂದಲಕ್ಕೆ ಇನ್ನೂ ತೆರೆ ಬಿದ್ದಿಲ್ಲ. ಸಮ್ಮೇಳನಕ್ಕೆ ಎನ್ನುವುದು ಮಾಯಾ ಜಿಂಕೆಯಾಗಿದೆ ಎಂದು ಸಾಹಿತ್ಯ ವಲಯದಿಂದ ಕೇಳಿ ಬರುತ್ತಿದೆ.

ಯಾದಗಿರಿ ಜಿಲ್ಲೆಯ ತಾಲ್ಲೂಕು ಕಸಾಪ ಘಟಕಗಳು ನಿಷ್ಕ್ರೀಯವಾಗಿವೆ. ಕೇವಲ ಪ್ರತಿಭಾ ಪುರಸ್ಕಾರಕ್ಕೆ ಸೀಮಿತಗೊಂಡಿವೆ. ಸಾಹಿತ್ಯ ಚುಟುವಟಿಕೆಗಳು ನಿಂತ ನೀರಾಗಿವೆ. ಕೊನೆ ಪಕ್ಷ ಅಕ್ಟೋಬರ್‌ ತಿಂಗಳಲ್ಲಿ ಶಹಾಪುರದಲ್ಲಿ ಜಿಲ್ಲಾ ಸಮ್ಮೇಳನ ನಡೆಸುತ್ತಾರೆ ಎಂಬ ಭರವಸೆ ಸಾಹಿತ್ಯ ಆಸಕ್ತರಲ್ಲಿ ಇತ್ತು. ಈಗ ಅದು ನಿರೀಕ್ಷೆ ಕೂಡ ಹುಸಿಯಾಗಿದೆ.

ADVERTISEMENT

‘ಸಮ್ಮೇಳನ ನಡೆಸಲು ಸಿದ್ಧತೆಯನ್ನು ಕನಿಷ್ಠ ಎರಡು ತಿಂಗಳು ಬೇಕಾಗುತ್ತದೆ. ಜಿಲ್ಲಾ ಘಟಕದ ಅಧ್ಯಕ್ಷರು ಮುತುವರ್ಜಿಹಿಸಿ ಡಿಸೆಂಬರ್‌ ತಿಂಗಳ ಕೊನೆ ವಾರದಲ್ಲಿ ಸಮ್ಮೇಳನ ನಡೆಸಿದರೆ ಉತ್ತಮ. ಇಲ್ಲವಾದರೆ ಯಾದಗಿರಿಯಲ್ಲಿಯೇ ನಡೆಸಿ’ ಎನ್ನುತ್ತಾರೆ ಕಸಾಪ ಸದಸ್ಯ ಬಸವರಾಜ ಅರುಣಿ.

ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ರವೀಂದ್ರನಾಥ ಹೊಸಮನಿ ಈಗಾಗಲೇ ಎರಡು ತಾಲ್ಲೂಕು ಸಾಹಿತ್ಯ ಸಮ್ಮೇಳನ ನಡೆಯಿಸಿ ಯಶಸ್ವಿಗೊಳಿಸಿದ್ದಾರೆ. ಜಿಲ್ಲಾ ಸಮ್ಮೇಳನ ನಡೆಸಲು ಉತ್ಸಾಹಕರಾಗಿದ್ದಾರೆ. ಆದರೆ ಸಮ್ಮೇಳನ ನಡೆಸಲು ಕನಿಷ್ಟ ₹ 25 ಲಕ್ಷ್ಟ  ಅಗತ್ಯವಿದೆ. ಇಷ್ಟೊಂದು ಆರ್ಥಿಕ ಸಂಪನ್ಮೂಲ ಕ್ರೋಢಿಕರಿಸುವುದು ಸವಾಲಿನ ಕೆಲಸವಾಗಿ ಪರಿಣಮಿಸಿದೆ ಎನ್ನುತ್ತಾರೆ ಕಸಾಪದ ಸದಸ್ಯರೊಬ್ಬರು.

ಜಿಲ್ಲಾ ಕಸಾಪ ಘಟಕ ಅಧ್ಯಕ್ಷರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ನಡುವೆ ಸಮನ್ವಯ ಸಾಧಿಸಿಕೊಂಡು ಸಾಹಿತ್ಯ ಆಸಕ್ತರ ನಿರೀಕ್ಷೆಯನ್ನು ಹುಸಿಗೊಳಿಸದೆ ಜಿಲ್ಲಾ ಸಮ್ಮೇಳನ ನಡೆಸಲು ಶ್ರಮಿಸಬೇಕು ಎನ್ನುತ್ತಾರೆ ಸಾಹಿತ್ಯ ಆಸಕ್ತರು.

ಕಸಾಪ ಅಧ್ಯಕ್ಷ- ಸಚಿವರ ನಡುವೆ ಗೊಂದಲ ಸಮ್ಮೇಳನ ನಡೆಸಲು ಬೇಕು ₹ 25ಲಕ್ಷ  | ಸಮನ್ವಯ ಸಾಧಿಸಿ ಸಮ್ಮೇಳನ ನಡೆಸಿ
ನವಂಬರ್‌ ತಿಂಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರನ್ನು ಖುದ್ದಾಗಿ ಭೇಟಿಯಾಗಿ ಡಿಸೆಂಬರ್‌ ಅಥವಾ ಜನೇವರಿಯಲ್ಲಿ ಶಹಾಪುರದಲ್ಲಿಯೇ ಜಿಲ್ಲಾ ಸಮ್ಮೇಳನ ನಡೆಸಲು ಒಪ್ಪಿಗೆ ಸೂಚಿಸುವಂತೆ ಮನವಿ ಮಾಡುತ್ತೇವೆ
ಸಿದ್ದಪ್ಪ ಹೊಟ್ಟಿ ಜಿಲ್ಲಾ ಕಸಾಪ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.