
ಶಹಾಪುರ: ‘ಯುವಕರು ಸಣ್ಣಪುಟ್ಟ ಸಮಸ್ಯೆಗಳನ್ನು ಬದಿಗೊತ್ತಿ ಶ್ರಮವಹಿಸಿ ವಿದ್ಯಾವಂತರಾಗಬೇಕು. ಶಿಕ್ಷಣ ನಮ್ಮೆಲ್ಲರ ಪ್ರಬಲ ಆಸ್ತ್ರವಾಗಿದೆ. ಶಿಕ್ಷಣಕ್ಕೆ ವ್ಯಕ್ತಿಯ ಬದುಕು ಬದಲಾಯಿಸುವ ಶಕ್ತಿ ಇದೆ’ ಎಂದು ಚಿತ್ರ ನಟ ಡಾಲಿ ಧನಂಜಯ ತಿಳಿಸಿದರು.
ತಾಲ್ಲೂಕಿನ ಇಬ್ರಾಹಿಂಪೂರ ಗ್ರಾಮದ ಸಾಯಿ ಮಂದಿರದ 4ನೇ ವರ್ಷದ ಜಾತ್ರಾ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಹಳ್ಳಿಯಿಂದ ಬಂದ ಪ್ರತಿಭೆಗಳು ದೊಡ್ಡ ಮಟ್ಟಕ್ಕೆ ಬೆಳೆಯಲು ಯಾವುದೇ ಅಡ್ಡಿ ಇಲ್ಲ. ಆದರೆ ಗುರಿ ಮತ್ತು ಶ್ರಮ ಅಗತ್ಯವಾಗಿದ್ದು ಇದಕ್ಕೆ ನನ್ನ ಬದುಕೆ ಸಾಕ್ಷಿ. ಮಕ್ಕಳು ದೊಡ್ಡ ಕನಸ್ಸು ಕಾಣಬೇಕು. ಅದರ ಈಡೇರಿಕೆಗೆ ನಿರಂತರ ಪ್ರಯತ್ನ ಹಾಗೂ ಛಲ ಸದಾ ನಮ್ಮೊಳಗೆ ತುಡಿಯುತ್ತಿರಬೇಕು. ತಂದೆ ತಾಯಿಯನ್ನು ನಾವು ಸದಾ ಸ್ಮರಿಸಬೇಕು’ ಎಂದರು.
ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌದರಿ, ಸಾಯಿ ಮಂದಿರದ ಅಧ್ಯಕ್ಷ ಮಹಾರಾಜ ದಿಗ್ಗಿ, ಮಾಜಿ ಸಚಿವ ಕೆ.ಶಿವನಗೌಡ ನಾಯಕ, ಲಲಿತಾ ಅನಪೂರ, ಶರಣು ಗದ್ದುಗೆ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.