ADVERTISEMENT

ರಾಮನವಮಿ: ತೊಟ್ಟಿಲೋತ್ಸವ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2023, 6:07 IST
Last Updated 1 ಏಪ್ರಿಲ್ 2023, 6:07 IST
ಹುಣಸಗಿ ಪಟ್ಟಣದ ವರಹಳ್ಳೆರಾಯ ದೇವಸ್ಥಾನದಲ್ಲಿ ಗುರುವಾರ ವೇದಾವತಿ ಭಜನಾ ಮಂಡಳಿಯ ವತಿಯಿಂದ ಹಮ್ಮಿಕೊಂಡಿದ್ದ ತೊಟ್ಟಿಲೋತ್ಸವ ಕಾರ್ಯಕ್ರಮದಲ್ಲಿ ಮಹಿಳೆಯರು ಭಾಗವಹಿಸಿದ್ದರು
ಹುಣಸಗಿ ಪಟ್ಟಣದ ವರಹಳ್ಳೆರಾಯ ದೇವಸ್ಥಾನದಲ್ಲಿ ಗುರುವಾರ ವೇದಾವತಿ ಭಜನಾ ಮಂಡಳಿಯ ವತಿಯಿಂದ ಹಮ್ಮಿಕೊಂಡಿದ್ದ ತೊಟ್ಟಿಲೋತ್ಸವ ಕಾರ್ಯಕ್ರಮದಲ್ಲಿ ಮಹಿಳೆಯರು ಭಾಗವಹಿಸಿದ್ದರು   

ಹುಣಸಗಿ: ಪಟ್ಟಣದ ವರಹಳ್ಳೆರಾಯ ದೇವಸ್ಥಾನದಲ್ಲಿ ಗುರುವಾರ ವೇದವತಿ ಮಹಿಳಾ ಭಜನಾ ಮಂಡಳಿಯ ವತಿಯಿಂದ ಶ್ರೀರಾಮನವಮಿ ಆಚರಿಸಲಾಯಿತು.

ಬೆಳಿಗ್ಗೆ ಅರ್ಚಕ ಪ್ರಲ್ಹಾದಾಚಾರ್ಯ ಜೋಷಿ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಬಳಿಕ ಭಜನಾ ಮಂಡಳಿಯ ಮಹಿಳೆಯರು ತೊಟ್ಟಿಲು ಪೂಜೆ ನೆರವೇರಿಸಿದರು. ಹರಿನಾಮ ಸ್ಮರಣೆ ಹಾಗೂ ಭಜನೆ ಮಾಡಿದರು. ಭಕ್ತರಿಗೆ ಕೋಸಂಬರಿ, ಪಾನಕ ವಿತರಿಸಲಾಯಿತು.

ಭಜನಾ ಮಂಡಳಿಯ ಅಧ್ಯಕ್ಷೆ ಭಾಗ್ಯಶ್ರೀ ದೇಶಪಾಂಡೆ, ಉಪಾಧ್ಯಕ್ಷೆ ಸುವರ್ಣಲತಾ, ಕಲ್ಪನಾ, ವಿದ್ಯಾವತಿ, ಮಾಲಾ, ಪದ್ಮಾವತಿ, ಸುಲೋಚನಾ, ಅಂಜನಾ, ಸರೋಜನಿ, ಸವಿತಾ ಶೆಟ್ಟಿ, ರೂಪಾ ಇದ್ದರು.

ADVERTISEMENT

ರಘುನಾಥಪುರದ ಕೋದಂಡ ರಾಮ ದೇವಸ್ಥಾನದಲ್ಲಿ ರಾಮನವಮಿ ಆಚರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.