
ವಡಗೇರಾ: ‘21ನೇ ಶತಮಾನದಲ್ಲಿ ಪ್ರತಿ ಕ್ಷೇತ್ರದಲ್ಲಿ ಅವಿಷ್ಕಾರ ಕಾಣುತ್ತಿದ್ದೇವೆ. ವಿಜ್ಞಾನ ಕ್ಷೇತ್ರದಲ್ಲಿ ಹೊಸ ಸಂಶೋಧನೆಗಳಿಂದ ತಂತ್ರಜ್ಞಾನದಲ್ಲಿ ಮಹತ್ತರ ಬದಲಾವಣೆ ಕಾಣುತಿದ್ದೇವೆ’ ಎಂದು ಉಪನ್ಯಾಸಕ ಗಂಗಾಧರ ಬಡಿಗೇರ ಹೇಳಿದರು.
ತಾಲ್ಲೂಕಿನ ಕುರುಕುಂದಾ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಸಿ.ವಿ. ರಾಮನ್ ಇಕೋ ಕ್ಲಬ್ ಮತ್ತು ಮಾದಕ ವ್ಯಸನ ಮುಕ್ತ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ವಿಜ್ಞಾನ ಕ್ಷೇತ್ರದಲ್ಲಿ ಅವಿಷ್ಕಾರಗಳು ಹೆಚ್ಚಾಗುತ್ತಿರುವುದರಿಂದ ಕಡಿಮೆ ಅವಧಿಯಲ್ಲಿ ಹೆಚ್ಚಿನ ಕೆಲಸ ಕಾರ್ಯ ಮಾಡಲು ಬಹಳ ಅನುಕೂಲವಾಗುತ್ತಿದೆ. ಇದರಿಂದ ಮಾನವ ಶ್ರಮ ಕಡಿಮೆಯಾಗುತ್ತಿದೆ’ ಎಂದು ತಿಳಿಸಿದರು.
‘ಯುವಕರು ದೇಶದ ಸಂಪತ್ತು. ಆದರೆ ಬಹಳಷ್ಟು ಯುವಕರು ಮಾದಕ ವ್ಯಸನಿಗಳಾಗುತ್ತಿದ್ದು, ಅಕಾಲಿಕ ಮರಣ ಹಾಗೂ ಅನೇಕ ರೋಗರುಜಿನಗಳಿಗೆ ಬಲಿಯಾಗುತಿದ್ದಾರೆ. ಇದೇ ಪ್ರವೃತ್ತಿ ಮುಂದುವರಿದರೆ ಮುಂಬರುವ ದಿನಗಳಲ್ಲಿ ದೇಶವು ಯುವ ಶಕ್ತಿಯನ್ನು ಕಳೆದುಕೊಳ್ಳುವ ಅಪಾಯವಿದೆ’ ಎಂದು ಕಳವಳ ವ್ಯಕ್ತಪಡಿಸಿದರು.
ವಿಜ್ಞಾನ ಮಾರ್ಗದರ್ಶಕ ಉಪನ್ಯಾಸಕ ಶರಣಗೌಡ ಅಗಸ್ತ್ಯ ಪ್ಲಾಸ್ಟಿಕ್ ಬಳಕೆ ನಿಷೇಧದ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಮುಖ್ಯಶಿಕ್ಷಕ ರವೀಂದ್ರ ದೇವರ ಗುಡಿ ಪ್ರಸ್ತಾವಿಕವಾಗಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ವಿಜ್ಞಾನ ಚಟುವಟಿಕೆಗಳಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಥಮ, ದ್ವಿತೀಯ ಬಹುಮಾನ ನೀಡಲಾಯಿತು. ಮಕ್ಕಳಿಗೆ ಉಚಿತವಾಗಿ ಶೂ, ಸಾಕ್ಸ್ ವಿತರಿಸಲಾಯಿತು.
ಗ್ರಾ.ಪಂ ಮಾಜಿ ಅಧ್ಯಕ್ಷೆ ಮುದ್ದಮ್ಮ ಗೂಡುಸಾಬ, ಎಸ್‌ಡಿಎಂಸಿ ಅಧ್ಯಕ್ಷ ಲಿಂಗಾರೆಡ್ಡಿ ಮಾಲಿಪಾಟೀಲ, ಶಿಕ್ಷಕಿಯರಾದ ನಾಗರತ್ನ, ಸಮೀನಾ, ಲಕ್ಷ್ಮಿ ದೀಪಕ, ಶಿಕ್ಷಕರಾದ ವೆಂಕನಗೌಡ, ಕುರುಮಯ್ಯ, ಬಸಪ್ಪ, ಗ್ರಾಮದ ಮುಖಂಡರಾದ ನಿಂಗಪ್ಪ ಕುರಿ, ನಿಂಗಪ್ಪ ಆವಣ್ಣೋರು , ಶರಣಪ್ಪ ಮಡಿವಾಳ, ಸಾಬಣ್ಣ ಮಗ್ಗದ, ಮಲ್ಲಿಕಾರ್ಜುನ ವಗ್ಗಾನೋರು, ರಾಜಅಹ್ಮದ್, ಮಹೇಬೂಬ, ಎಸ್‌ಡಿಎಂಸಿ ಸದಸ್ಯರು ಇತರರು ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಐಶ್ವರ್ಯ ಪ್ರಾರ್ಥಿಸಿದರು. ಶಿಕ್ಷಕ ಬಸವರಾಜ ಪಾಟೀಲ ಸ್ವಾಗತಿಸಿದರು. ಶಿಕ್ಷಕ ಯಲ್ಲಪ್ಪ ಕುರಕುಂದಿ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.