ADVERTISEMENT

ಯಾದಗಿರಿ: ನಿಗಮ ಮಂಡಳಿ ಪರೀಕ್ಷೆಯಲ್ಲಿ ಬ್ಲೂಟೂತ್‌ ಬಳಕೆ, ಮತ್ತೆ 7 ಜನರ ಬಂಧನ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2023, 16:07 IST
Last Updated 30 ಅಕ್ಟೋಬರ್ 2023, 16:07 IST
<div class="paragraphs"><p>–ಸಾಂದರ್ಭಿಕ ಚಿತ್ರ</p></div>

–ಸಾಂದರ್ಭಿಕ ಚಿತ್ರ

   

ಯಾದಗಿರಿ: ವಿವಿಧ ನಿಗಮ ಮಂಡಳಿ ಪರೀಕ್ಷೆಯಲ್ಲಿ ಬ್ಲೂಟೂತ್‌ ಬಳಕೆ ಸಂಬಂಧ ಮತ್ತೆ 7 ಜನ ಆರೋಪಿಗಳನ್ನು ನಗರ ಪೊಲೀಸ್‌ ಠಾಣೆಯ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಇದರಿಂದ ಬಂಧಿತರ ಸಂಖ್ಯೆ 16ಕ್ಕೆ ಏರಿಕೆಯಾಗಿದೆ.

ಕಲಬುರಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಚಿಂಚೋಳಿ ಗ್ರಾಮದ ರಾಹುಲ್ ಶಿವಶರಣ ಬಸರಿಗಿಡ, ಅಳ್ಳಗಿ ಗ್ರಾಮದ ಖಾಜಾಸಾಬ್ ಇವರಿಬ್ಬರು ಅಭ್ಯರ್ಥಿಗಳಾಗಿದ್ದಾರೆ.

ADVERTISEMENT

ಈ ಹಿಂದೆ ಬಂಧಿತನಾಗಿದ್ದ ಬಾಬುರಾವಗೆ ಸಹಕಾರ ನೀಡಿದ ಡೊಣ್ಣೂರು ಗ್ರಾಮದ ಓಂಕಾರ್ ಪೀರಪ್ಪ ಸೊನ್ನ, ನಾಮಕರ್ ಪೀರಪ್ಪ ಸೊನ್ನ, ಪ್ರಭುಲಿಂಗ ರಾಜಕುಮಾರ್ ಕುಂಬಾರ, ಸಿದ್ದರಾಮ ಎಂಬುವವನಿಗೆ ಸಹಕಾರ ನೀಡಿದ ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ದೇವಣಗಾಂವ್ ಗ್ರಾಮದ ಶ್ರೀಶೈಲ ಸಾಯಿಬಣ್ಣ ಸೊನ್ನ, ಸೊನ್ನ ಗ್ರಾಮದ ವಡಗೇರಾ ಉಪಖಜಾನೆ ಎಫ್‌ಡಿಎ ಬಸವರಾಜ್ ತುಕಾರಾಂ ಅಂಕಲಗಿ ಎಂಬುವವರನ್ನು ಬಂಧಿಸಲಾಗಿದೆ.

‘ಪರೀಕ್ಷಾ ಅಕ್ರಮಕ್ಕೆ ಸಬಂಧಿಸಿದಂತೆ ಸಾಕ್ಷಾಧಾರಗಳನ್ನು ಸಂಗ್ರಹಿಸುವ ಕುರಿತು ತನಿಖೆ ಪ್ರಗತಿಯಲ್ಲಿದ್ದು, ಯಾದಗಿರಿ ನಗರದಲ್ಲಿ ನಡೆದ ಕೆಇಎ ಪರೀಕ್ಷಾ ಅಕ್ರಮ ಘಟನೆಗೆ ಸಂಬಂಧಿಸಿದಂತೆ ಇದುವರೆಗೂ 16 ಜನ ಆರೋಪಿಗಳನ್ನು ಬಂಧಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಸಂಗೀತಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.