
ಶಹಾಪುರ: ತಾಲ್ಲೂಕಿನ ದೋರನಹಳ್ಳಿ ಪಟ್ಟಣದ ಹತ್ತಿರ ನಡೆದ ರಸ್ತೆ ಅಪಘಾತದಲ್ಲಿ ಭಾನುವಾರ ಅಪಘಾತಪಡಿಸಿದ ಟ್ರ್ಯಾಕ್ಟರ್‌ನ್ನು ಶಹಾಪುರ ಠಾಣೆಯ ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.
ರಸ್ತೆ ಅಪಘಾತದಲ್ಲಿ ಇಬ್ಬರು ಬಾಲಕರು ಮೃತಪಟ್ಟಿದ್ದರು ಹಾಗೂ ಒಬ್ಬ ಬಾಲಕ ಗಾಯಗೊಂಡಿದ್ದ. ಅದರಂತೆ ಟ್ರ್ಯಾಕ್ಟರ್ ಹಿಂಬಂದಿಯಲ್ಲಿ ಉದ್ದನೆಯ ಪಲಗ (ರಂಟೆ ಹೊಡೆಯುವಾಗ ಉಪಯೋಗಿಸುವ ವಸ್ತು) ಸಿಕ್ಕಿಕೊಂಡು ಹೋಗುತ್ತಿದ್ದಾಗ ಪಲಗಕ್ಕೆ ಸಿಕ್ಕುಕೊಂಡಿದ್ದರಿಂದ ಕಾಲು ಕತ್ತರಿಸಿಬಹುದು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಬೈಕಿಗೆ ಟ್ರ್ಯಾಕ್ಟರ್ ಗುದ್ದಿ ವಾಹನ ಸಮೇತ ಚಾಲಕ ಓಡಿ ಹೋಗಿದ್ದ. ಇದು ಪೊಲೀಸರಿಗೆ ದೊಡ್ಡ ಸವಾಲು ಆಗಿ ಪರಿಣಮಿಸಿತ್ತು. ಒಂದು ವಾರ ಸಂಪೂರ್ಣವಾಗಿ ವಿಚಾರಣೆ ಹಾಗೂ ಮಾಹಿತಿ ಕಲೆ ಹಾಕಿ ಕೊನೆಗೂ ಟ್ರ್ಯಾಕ್ಟರ್ ವಶಪಡಿಸಿಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ರಸ್ತೆ ಅಪಘಾತ ಪ್ರಕರಣ ಕುತೂಹಲ ಮೂಡಿಸಿತ್ತು. ಪೊಲೀಸರ್ ಕಾರ್ಯಕ್ಕೆ ಜನತೆ ಮೆಚ್ಚಿಗೆ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.